Political News: ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿದ್ದು, ಕಾರ್ಯಕರ್ತರು ಕೇಂದ್ರ ಸಚಿವರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಈ ಅಭಿನಂದನಾ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರ್, ಜಿ.ಟಿ.ದೇವೇಗೌಡ ಸೇರಿ ಹಲವು ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ. ಇನ್ನು ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ನಾಡಪ್ರಭು ಕೆಂಪೇಗೌಡ ಅವರ ಬೆಳ್ಳಿ ಪ್ರತಿಮೆ ನೀಡಿದ್ದಾರೆ.
ಇದಾದ ಬಳಿಕ ಕುಮಾರಸ್ವಾಮಿಗೆ ಕಾರ್ಯಕರ್ತರು ಹಾರ ಹಾಕಿ, ಸನ್ಮಾನ ಮಾಡಲು ಮುಂದಾದಾಗ, ಪಕ್ಷದ ಕಾರ್ಯಕರ್ತರು ಹಾರ ಹಾಕುವುದನ್ನು ನಿಲ್ಲಿಸಿ. ಸಭೆಯ ನಂತರ ಪಕ್ಷದ ಕಚೇರಿಯಲ್ಲಿ ಹಾರ ಹಾಕಿ. ಎಲ್ಲ ಕಾರ್ಯಕರ್ತರಿಗೆ ಸಮಯ ಕೊಡುತ್ತೇನೆ. ರಾಜ್ಯದ ಕಚೇರಿಗೆ ಒಂದು ಸಂದೇಶ ಕೊಡಲು ಬಂದಿದ್ದೇನೆ. ಕಾರ್ಯಕ್ರಮ ನಡೆಯಲು ಅವಕಾಶ ಮಾಡಿಕೊಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ
ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?