Political News: ತಾತಾ ಆದ ಡಿಸಿಎಂ ಡಿ.ಕೆ.ಶಿವಕುಮಾರ್: ಪುತ್ರಿ ಐಶ್ವರ್ಯಾಗೆ ಹೆಣ್ಣು ಮಗು ಜನನ

Political News: ಡಿಸಿಎಂ ಡಿ.ಕೆ.ಶಿವಕುಮಾರ್ ಸದ್ಯ ತಾತಾ ಆಗಿದ್ದು, ಅವರ ಪುತ್ರಿ ಐಶ್ವರ್ಯಗೆ ಹೆಣ್ಣು ಮಗು ಜನಿಸಿದೆ. ಐಶ್ವರ್ಯ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಮತ್ತು ಕೆಫೆ ಕಾಫಿ ಡೇ ಸಂಸ್ಥಾಪಕ ದಿ.ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಇಬ್ಬರೂ ಕೆಲ ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಇದೀಗ ಐಶ್ವರ್ಯ ಸಿಹಿ ಸುದ್ದಿ ನೀಡಿದ್ದು, ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಐಶ್ವರ್ಯ ಅವರನ್ನು ದಾಖಲಿಸಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದೀಗ ಡಿಕೆಶಿ ಮೊಮ್ಮಗಳನ್ನು ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದು, ತಾತನಾದ ಖುಷಿಯಲ್ಲಿದ್ದಾರೆ.

About The Author