Tuesday, April 15, 2025

Latest Posts

ಟೀಮ್ ಇಂಡಿಯಾ ಸೇರಿಕೊಂಡ ಕೋಚ್ ರಾಹುಲ್ ದ್ರಾವಿಡ್

- Advertisement -

ಲಂಡನ್:ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಲಿಸಿಸ್ಟರ್ನಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಬರ್ಮಿಂಗ್ ಹ್ಯಾಮನ್ ನಲ್ಲಿ ನಡೆಯಲಿರುವ 5ನೇ ಟೆಸ್ಟ್ ಪಂದ್ಯ ಕ್ಕೆ ಭಾರತ ತಂಡ ಸಜ್ಜಾಗುತ್ತಿದೆ.

ತವರಿನಲ್ಲಿ ದ.ಆಫ್ರಿಕಾ ವಿರುದ್ಧದ ಟಿ20 ಸರಣಿ ನಂತರ ಕೋಚ್ ದ್ರಾವಿಡ್ ಇದೀಗ ಆಂಗ್ಲರ ನಾಡಿಗೆ ತೆರೆಳಿದ್ದಾರೆ.

ಮಂಗಳವಾರ ಇಲ್ಲಿನ ಲಿಸಿಸ್ಟರ್ ಶೈರ್ ಕಂಟ್ರಿ ಮೈದಾನದಲ್ಲಿ ತರಬೇತಿ ವೇಳೆ ಕೋಚ್ ದ್ರಾವಿಡ್ ಆಟಗಾರರ ಜೊತೆ ಮಾತುಕತೆ ನಡೆಸಿದರು. ಈ ವರ್ಷದ ಮೊದಲ ವಿದೇಶ ಪ್ರವಾಸದಲ್ಲೆ ಭಾರತ ಆತಿಥೇಯ ದ,ಆಫ್ರಿಕಾ ವಿರುದ್ಧ ಸೋತಿತ್ತು.

ಬೌಲಿಂಗ್ ಕೋಚ್ ಪಾರಾಸ್ ಮಹಂಬ್ರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ತರಬೇತಿಯನ್ನು ಮುನ್ನಡೆಸುತ್ತಿದ್ದಾರೆ.

ಟೆಸ್ಟ್ ಗೂ ಮುನ್ನ ಭಾರತ ತಂಡ ಜೂ.24ರಂದು ಲಿಸಿಸ್ಟರ್ ಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

- Advertisement -

Latest Posts

Don't Miss