ಸೋರೇಕಾಯಿ ಅಂದ್ರೆ ಮಾರು ದೂರ ಓಡುವವರು ಹಲವರಿದ್ದಾರೆ. ಯಾಕಂದ್ರೆ ಅವರಿಗೆ ಸೋರೆಕಾಯಿಯಿಂದ ಮಾಡುವ ಪದಾರ್ಥ ಒಂಚೂರು ಇಷ್ಟವಾಗುವುದಿಲ್ಲ. ಆದ್ರೆ ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಸಿಪ್ಪೆ ಅದಕ್ಕಿಂತ ಒಳ್ಳೆಯದು. ಸೊರೆಕಾಯಿ ಸಿಪ್ಪೆಯಿಂದ ಪದಾರ್ಥಗಳನ್ನ ಮಾಡಿ, ಸೇವಿಸಿದರೆ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸೋರೇಕಾಯಿಯಿಂದ ಹಲವು ಪದಾರ್ಥಗಳನ್ನು ಮಾಡಲಾಗತ್ತೆ. ಸೊರೇಕಾಯಿ ಬಜ್ಜಿ, ಸಾಂಬಾರ್, ಪಲ್ಯ, ರಾಯ್ತಾ, ಪಾಯಸಕ್ಕೂ ಕೂಡ ಸೊರೇಕಾಯಿ ಹೋಳನ್ನ ಬಳಸಲಾಗತ್ತೆ. ಆದ್ರೆ ಸೊರೇಕಾಯಿಯಷ್ಟೇ ಅಲ್ಲದೇ ಅದರ ಸಿಪ್ಪೆಯನ್ನ ಕೂಡ ಬಳಕೆ ಮಾಡಿದ್ರೆ, ಆರೋಗ್ಯದ ಲಾಭ ಪಡೆಯಬಹುದು. ಸೊರೇಕಾಯಿ ಸಿಪ್ಪೆಯಿಂದ ಚಟ್ನಿ,ಸೂಪ್, ರಾಯ್ತಾ ಎಲ್ಲವನ್ನೂ ಮಾಡಲಾಗತ್ತದೆ. ಪೈಲ್ಸ್ನಿಂದ ಬಳಲುತ್ತಿರುವವರು ಸೊರೇಕಾಯಿ ಸಿಪ್ಪೆಯ ಸೇವನೆ ಮಾಡಬೇಕು. ಇದರಿಂದ ಪೈಲ್ಸ್ ನಿವಾರಣೆಯಾಗುತ್ತದೆ. ಸೊರೇಕಾಯಿ ಸಿಪ್ಪೆಯನ್ನ ಒಣಗಿಸಿ, ಅದು ಚೆನ್ನಾಗಿ ಒಣಗಿದ ಮೇಲೆ ಪೌಡರ್ ಮಾಡಿ, ಅದನ್ನು ಬೆಳಿಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚು ಹಾಲಿನೊಂದಿಗೆ ಸೇವಿಸಬೇಕು. ಒಂದು ಸ್ಪೂನ್ ಸೊರೇಕಾಯಿ ಸಿಪ್ಪೆಯ ಪೌಡರ್ ಮತ್ತು ಒಂದು ಲೋಟ ಹಾಲು ಸೇರಿಸಿ ಕುಡಿಯಬೇಕು. ಹಾಲು ಇಲ್ಲದಿದ್ದಲ್ಲಿ ನೀರನ್ನ ಕೂಡ ಬಳಸಬಹುದು.
ಕಾಲಲ್ಲಿ, ಪಾದದಲ್ಲಿ ಉರಿ ಅಥವಾ ತುರಿಕೆಯಾಗುತ್ತಿದ್ದಲ್ಲಿ, ಸೊರೇಕಾಯಿ ಸಿಪ್ಪೆ ಬಳಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸೊರೇಕಾಯಿ ಸಿಪ್ಪೆಯನ್ನ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ, ಅದನ್ನ ಪಾದಕ್ಕೆ ಹಚ್ಚಿದ್ದಲ್ಲಿ, ತುರಿಕೆ ಅಥವಾ ಉರಿ ಇದ್ದಲ್ಲಿ ಕಡಿಮೆಯಾಗುತ್ತದೆ. ದೇಹದಲ್ಲಿ ಎಲ್ಲಿ ಉರಿ, ತುರಿಕೆ ಇದ್ದರೂ ಈ ರೆಮಿಡಿಯನ್ನ ನೀವು ಟ್ರೈ ಮಾಡಬಹುದು. ಇನ್ನು ಸೊರೇಕಾಯಿ ಸಿಪ್ಪೆ ಸೇವಿಸಿದ್ದಲ್ಲಿ ಅಥವಾ ಬಳಸಿದ್ದಲ್ಲಿ ನಿಮಗೆ ಅಲರ್ಜಿ ಆಗುತ್ತದೆ ಎಂದಾದ್ದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ ನಂತರ ಬಳಸುವುದು ಉತ್ತಮ.




