ಚೀಯಾ ಸೀಡ್ಸ್. ಇದನ್ನು ಹೆಚ್ಚಿನ ಜನ ತೂಕ ಇಳಿಸಿಕೊಳ್ಳೋಕ್ಕೆ ಬಳಸುತ್ತಾರೆ. ಆದ್ರೆ ಇದನ್ನು ಬಿಟ್ಟು, ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಹಾಗಾದ್ರೆ ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳಿಗ್ಗೆ 15ರರಿಂದ 20 ನಿಮಿಷಗಳ ಕಾಲ ಚೀಯಾ ಸೀಡ್ಸ್‌ನ್ನ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿ ಕುಡಿಯಿರಿ. ನಿಮಗೆ ಇಷ್ಟವಿದ್ದಲ್ಲಿ, ಇದರೊಂದಿಗೆ ನೀವು, ಕೊಂಚ ಜೆನುತುಪ್ಪ ಮತ್ತು ನಿಂಬೆಹಣ್ಣನ್ನು ಬೆರೆಸಬಹುದು. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. ಇದರ ಜೊತೆಗೆ ನೀವು ಯೋಗಾಸನ, ವಾಕಿಂಗ್, ಎಕ್ಸ್‌ಸೈಜ್‌ಗಳನ್ನೆಲ್ಲ ಮಾಡಬೇಕು.
ಇನ್ನು ನಿಮಗೆ ತೂಕ ಇಳಿಸಿಕೊಳ್ಳಬೇಕು ಅಂತಾ ಆಸೆ ಇದ್ದು, ನೀವು ತಿನ್ನುವ ತಿಂಡಿಯಿಂದ ಸರಿಯಾಗಿ ಹೊಟ್ಟೆ ತುಂಬದೇ, ಹೆಚ್ಚು ತಿಂದು ನಿಮ್ಮ ತೂಕ ಇಳಿಯುತ್ತಿಲ್ಲವಾದಲ್ಲಿ, ನೀವು ಚೀಯಾ ಸೀಡ್ಸ್‌ನ್ನ ನೆನೆಸಿಡಿ. ಅದನ್ನ ನೀವು ಬಳಸುವ ಸಲಾಡ್ ಜೊತೆ, ಅಥವಾ ಮಿಲ್ಕ್ ಶೇಕ್ ಜೊತೆ ತಿನ್ನಿರಿ. ಇದರಿಂದ ನಿಮ್ಮ ದೇಹದ ತೂಕ ಇಳಿಯುವುದಲ್ಲದೇ, ನಿಮಗೆ ಹೆಚ್ಚು ಹಸಿವಾಗುವುದೂ ಇಲ್ಲ. ಇದನ್ನ ನೀವು ಸೂಪ್, ಸ್ಮೂದೀಸ್, ಜ್ಯೂಸ್ ಮಾಡುವಾಗೂ ಬಳಸಬಹುದು.
ಇದರ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗೂ ಮುಕ್ತಿ ಪಡೆಯಬಹುದು. ಮಾಂಸಾಹಾರಿಗಳಿಗೆ ಸಿಗುವ ಪ್ರೋಟೀನ್, ಸಸ್ಯಾಹಾರಿಗಳಿಗೂ ಸಿಗಬೇಕು ಅಂದ್ರೆ, ಅಂಥವರು ಚೀಯಾ ಸೀಡ್ಸ್ ಸೇವಿಸಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಚೀಯಾಸೀಡ್ಸ್ ಸಹಕಾರಿಯಾಗಿದೆ. ನೀವು ಜಿಮ್ ಮಾಡುತ್ತಿದ್ದಲ್ಲಿ, ನಿಮ್ಮ ಬಾಡಿ ಬೆಳೆಸುತ್ತಿದ್ದಲ್ಲಿ, ನೀವು ಪ್ರತಿದಿನ ಕುಡಿಯುವ ಮಿಲ್ಕ್ ಶೇಕ್‌ಗೆ ಚೀಯಾ ಸೀಡ್ಸ್, ನೆನೆಸಿ, ಬೆರೆಸಿ, ಕುಡಿಯಿರಿ. ಇದು ದೇಹಕ್ಕೆ ತುಂಬಾನೇ ಒಳ್ಳೆಯದು.
ಚೀಯಾ ಸೀಡ್ಸ್ ದೇಹಕ್ಕೆ ತಂಪಾಗಿರುವುದರಿಂದ ಇದರ ಸೇವನೆಯಿಂದ, ದೇಹದಲ್ಲಿರುವ ಉಷ್ಣಾಂಶವನ್ನು ಕಡಿಮೆ ಮಾಡಬಹುದು. ನಮ್ಮ ದೇಹದಲ್ಲಿ ಉಷ್ಣ ಪ್ರಮಾಣ ಮತ್ತು ತಂಪಿನ ಪ್ರಮಮಾಣ ಸಮವಾಗಿದ್ರೆ, ನಮ್ಮ ಕೂದಲಿನ ಬೆಳವಣಿಗೆ ಸರಿಯಾಗುತ್ತದೆ. ಮುಖದ ಸೌಂದರ್ಯವೂ ಹೆಚ್ಚುತ್ತದೆ. ಇನ್ನು ನಿಮಗೆ ಚೀಯಾ ಸೀಡ್ಸ್ ತಿಂದ್ರೆ ಅಲರ್ಜಿ ಅಂತಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಚೀಯಾ ಸೀಡ್ಸ್ ಬಳಸುವುದು ಉತ್ತಮ. ಆದ್ರೆ ನೆನಪಿರಲಿ, ಎಂದಿಗೂ ನೀವು ಚೀಯಾ ಸೀಡ್ಸನ್ನ ನೆನಸದೇ, ತಿನ್ನಬಾರದು. ಇದರಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ.