Tuesday, October 14, 2025

Latest Posts

ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿದಿದ್ದೀರಾ..?

- Advertisement -

ನಿಸರ್ಗದಿಂದ ಸಿಕ್ಕ ಹಲವಾರು ವರಗಳಲ್ಲಿ ಸೊಪ್ಪುಗಳು ಕೂಡಾ ಒಂದು. ಒಂದೊಂದು ಸೊಪ್ಪಿನಲ್ಲೂ ಒಂದೊಂದು ಗುಣಗಳಿದೆ. ಅಂಥ ಅತ್ಯುತ್ತಮ ಗುಣವುಳ್ಳ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಈ ಸೊಪ್ಪಿನ ವಿಶೇಷ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ..

ಪಾಲಕ್‌ ಸೊಪ್ಪನ್ನು ಗರ್ಭಿಣಿಯರಿಗೆ ತಿನ್ನಲು ಹೇಳಲಾಗುತ್ತದೆ. ಸೂಪ್, ಪಲ್ಯ, ಸಾರು, ಸಾಂಬಾರ್, ಪಲಾಾವ್ ಇತ್ಯಾದಿ ಮಾಡಿ ತಿನ್ನಲು ಹೇಳಲಾಗುತ್ತದೆ. ಯಾಕಂದ್ರೆ ಪಾಲಕ್ ಸೊಪ್ಪು ಸೇವಿಸೋದ್ರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಬೆಳೆಯುವ ಮಗುವಿಗೂ ಇದು ಒಳ್ಳೆಯದು.

ವಿಟಾಮಿನ್ ಎ ಮತ್ತು ಐರನ್ ನಿಂದ ಭರಪೂರವಾಗಿರುವ ಪಾಲಕ್ ಸೊಪ್ಪು ತಿನ್ನೋದ್ರಿಂದ ದೇಹಕ್ಕೆ ಕಬ್ಬಿಣಾಂಶ ಸಿಗುತ್ತದೆ. ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುವುದೆಂದರೆ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ ಎಂದರ್ಥ. ಅಲ್ಲದೇ ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ನಿಮ್ಮ ದೇಹ ನಿಶ್ಯಕ್ತಿಯಿಂದ ಕೂಡಿದ್ದರೆ, ಬರೀ ಒಂದು ವಾರ ಪಾಲಕ್ ಸೊಪ್ಪು ತಿಂದು ನೋಡಿ. ನಿಮ್ಮ ದೇಹದಲ್ಲಾಗುವ ಶಕ್ತಿಯುತ ಬದಲಾವಣೆಯನ್ನ ನಿಮಗೇ ನಂಬಲಾಗುವುದಿಲ್ಲ.

ಆದ್ರೆ ನೀವು ಪಾಲಕ್ ಸೊಪ್ಪು ತಿನ್ನುವಾಗ, ಅದನ್ನು ಚೆನ್ನಾಗಿ ತೊಳೆದು ತಿನ್ನಬೇಕು. ಅದನ್ನು ತೊಳೆಯದೇ, ಅರ್ಧಂಬರ್ಧ ಸ್ವಚ್ಛ ಮಾಡಿ ತಿಂದರೆ, ಅದರಲ್ಲಿರುವ ಕೊಳೆಯೂ ನಿಮ್ಮ ದೇಹ ಸೇರಿ, ನಿಮ್ಮ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ. ಹಾಗಾಗಿ ಯಾವುದೇ ಸೊಪ್ಪು, ತರಕಾರಿ, ಹಣ್ಣು ತಿನ್ನುವುದಿದ್ದರೂ, ಚೆನ್ನಾಗಿ ತೊಳೆದು ತಿನ್ನಿ. ಇನ್ನು ನಿಮಗೆ ಪಾಲಕ್ ಸೊಪ್ಪು ತಿಂದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಪಾಲಕ್ ಸೊಪ್ಪು ಸೇವಿಸುವುದು ಉತ್ತಮ.

- Advertisement -

Latest Posts

Don't Miss