Tuesday, April 22, 2025

Latest Posts

PRK ಪ್ರೊಡಕ್ಷನ್ ನಲ್ಲಿ ನಟಿಸಲಿದ್ದಾರೆ ಆಶಿಕಾ..!

- Advertisement -

https://karnatakatv.net : ಆಶಿಕಾ ಕರ್ನಾಟಕ ಕ್ರಶ್ ಆಗಿ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ಮುದ್ದಾದ ನಟಿ. ಸದ್ಯ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬ್ಯೂಸಿಯಾಗಿದ್ದಾರೆ. ಆಶಿಕಾ ಅವರು ಪುನೀತ್ ಜೊತೆ ದಿತ್ವ ಸಿನಿಮಾದಲ್ಲಿ ನಟಿಸಬೇಕಿತ್ತು ಆದರೇ ಅಪ್ಪು ಅಕಾಲಿಕಾ ಮರಣದಿಂದ ಆಶಿಕಾ ಅವರ ಇ ಕನಸು ನನಸಾಗಲಿಲ್ಲ. ಆದರೇ ಈಗ ಪುನೀತ್ ಅವರ ಬ್ಯಾನರ್ ನಲ್ಲಿ ಮೂಡಿ ಬರಲಿರೋ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಸಿನಿಮಾಗೆ O2 ಎಂಬ ಶೀಷ್ರಿಕೆ ಇಡಲಾಗಿದ್ದು,ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಾಣವಾಗುತ್ತಿದೆ. ಈಗಾಗಲೇ O2 ಚಿತ್ರ ನಿರ್ಮಾಣ ಮಾಡುತ್ತಿರುವ ಮಾಹಿತಿಯನ್ನು ಪುನೀತ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು..

“ಮೊದಲು, ನಾನು ನಿರ್ವಹಿಸಬಹುದಾದ ಪಾತ್ರಗಳಿಗೆ ಬಂದಾಗ ನನಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ನನ್ನ ದಾರಿಯಲ್ಲಿ ಬರುವ ಯಾವುದನ್ನಾದರೂ ನಾನು ಆರಿಸಿಕೊಳ್ಳಬೇಕಾಗಿತ್ತು ಮತ್ತು ನನ್ನನ್ನು ತೆರೆಯ ಮೇಲೆ ಚೆನ್ನಾಗಿ ಪ್ರದರ್ಶಿಸಬಲ್ಲ ಒಳ್ಳೆಯ ಜನರೊಂದಿಗೆ ಕೆಲಸ ಮಾಡಲು ನಾನು ಆರಿಸಿಕೊಳ್ಳುತ್ತೇನೆ. ಆದರೆ ಈಗ, ಪ್ರೇಕ್ಷಕರು ಚಲನಚಿತ್ರಗಳನ್ನು ನೋಡುವ ರೀತಿ ಬದಲಾಗುತ್ತಿದೆ ಮತ್ತು ನಟರಾಗಿ ನಾವು ನಮ್ಮನ್ನು ನವೀಕರಿಸಿಕೊಳ್ಳಬೇಕು. ತೀವ್ರವಾದ ಬದಲಾವಣೆಗಳಿಲ್ಲದಿದ್ದರೂ ಮತ್ತು ನನಗೆ ಇನ್ನೂ ಹೆಚ್ಚಿನ ಆಯ್ಕೆಗಳಿಲ್ಲದಿದ್ದರೂ, ನಾನು ಈಗ ನನ್ನನ್ನು ಪ್ರಚೋದಿಸುವ ಪಾತ್ರಗಳನ್ನು ಆಯ್ಕೆ ಮಾಡಬಹುದು, ಎಂದು ಅವರು ಹೇಳುತ್ತಾರೆ.

ಇನ್ನೂ O2 ನಲ್ಲಿ ಆಶಿಕಾ ವೈದ್ಯೆ ಪಾತ್ರವನ್ನು ನಿರ್ವಹಿಸಲಿದ್ದಾರೆ. “ಮುಖ್ಯ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಮತ್ತು ನನ್ನ ಎದುರು ಇಬ್ಬರು ಪುರುಷ ನಾಯಕರಿದ್ದಾರೆ. ಉದ್ಯಮವನ್ನು ಬೆಳೆಸುವ ಪುನೀತ್ ಸರ್ ಅವರ ಕನಸಿನ ಭಾಗವಾಗಿದ್ದೇನೆ. ಇದು ನನಗೆ ಖುಷಿಯಾಗಿದೆ” ಎಂದು ಆಶಿಕಾ ಹೇಳಿದ್ದಾರೆ.

ರಾಘವ್ ಮತ್ತು ಪ್ರಶಾಂತ್ ರಾಜ್ ನಿರ್ದೇಶನದ ಮೆಡಿಕಲ್ ಥ್ರಿಲ್ಲರ್ ಚಿತ್ರವಾಗಿದೆ O2. ಪಾತ್ರವರ್ಗವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಚಿತ್ರತಂಡ. ಪುನೀತ್ ರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಕವಲುದಾರಿ, ಮಾಯಾಬಜಾರ್ , ಫ್ರೆಂಚ್ ಬಿರಿಯಾನಿ, ಲಾ ಸಿನಿಮಾಗಳ ನಂತರ O2 ಪಿ,ಆರ್,ಕೆ ಬ್ಯಾನರ್‌ನಿಂದ ಬರುತ್ತಿರುವ ಮತ್ತೊಂದು ಆಸಕ್ತಿದಾಯಕ ಚಿತ್ರವಾಗಲಿದೆ.

- Advertisement -

Latest Posts

Don't Miss