Saturday, May 17, 2025

Latest Posts

ಈ ಒಂದು ಹಣ್ಣು ಪ್ರತಿದಿನ ತಿಂದ್ರೆ ನೀವಿರ್ತಿರಾ ಫಿಟ್ ಆ್ಯಂಡ್ ಫೈನ್..

- Advertisement -

ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ ಹಣ್ಣು..? ಆ ಹಣ್ಣನ್ನ ತಿಂದ್ರೆ ಏನೇನು ಪ್ರಯೋಜನವಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಾವಿವತ್ತು ಹೇಳೋಕ್ಕೆ ಹೊರಟಿರುವ ಹಣ್ಣು ಅಂದ್ರೆ ಪಪ್ಪಾಯಿ ಹಣ್ಣು. ಆರೋಗ್ಯಕರ ಹಣ್ಣಾದದ ಪಪ್ಪಾಯಿ ಹಣ್ಣನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ತಿಂಡಿಯ ಜೊತೆ ಸ್ವಲ್ಪ ಸ್ವಲ್ಪ ತಿಂದ್ರೆ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ನೀವು ಇಡೀ ಒಂದು ಪಪ್ಪಾಯಿ ತಿನ್ನಬೇಕೆಂದಿಲ್ಲ. ಬದಲಾಗಿ ಒಂದು ಚಿಕ್ಕ ಬೌಲ್, ಅಂದ್ರೆ 7ರಿಂದ 8 ಪೀಸ್ ಪಪ್ಪಾಯಿ ಹೋಳು ತಿಂದ್ರೂ ಸಾಕು. ಯಾಕಂದ್ರೆ ಕೆಲವರಿಗೆ ಪಪ್ಪಾಯಿ ಹಣ್ಣು ತಿಂದ್ರೆ ದೇಹದಲ್ಲಿ ಉಷ್ಣ ಹೆಚ್ಚಾಗಿ, ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಪಪ್ಪಾಯಿಯನ್ನು ಮಿತವಾಗಿ ತಿನ್ನಿ.

ಹೆಣ್ಣು ಮಕ್ಕಳು ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ಹಣ್ಣು ತಿಂದ್ರೆ, ಮುಂದೆ ಸಂತಾನ ಸಮಸ್ಯೆ ಬರೋದಿಲ್ಲ. ಆದ್ರೆ ಗರ್ಭ ಧರಿಸಿದಾಗ ಮಾತ್ರ ಪಪ್ಪಾಯಿ ಹಣ್ಣನ್ನ ಸೇವಿಸಬಾರದು. ಯಾಕಂದ್ರೆ ಇದು ಉಷ್ಣ ಭರಿತವಾದ್ದರಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇನ್ನು ನಿಮ್ಮ ಋತುಚಕ್ರ ಲೇಟ್ ಆದಲ್ಲಿ ನೀವು ಪಪ್ಪಾಯಿ ಹಣ್ಣು ಸೇವಿಸಿ. ಆಗ ನಿಮ್ಮ ಋತು ಚಕ್ರ ಬೇಗ ಆಗುತ್ತದೆ.

ಈ ಹಣ್ಣು ಕಾಲೇಸ್ಟ್ರಾಲನ್ನ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮ  ದೇಹದ ತೂಕ  ಇಳಿಸಿ, ನಿಮ್ಮನ್ನ ಫಿಟ್ ಆಗಿರಿಸುತ್ತದೆ. ಮಲಬದ್ಧತೆ ಇದ್ದಲ್ಲಿ, ಅದನ್ನೂ ಹೋಗಲಾಡಿಸುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿಸುವಲ್ಲಿ ಪಪ್ಪಾಯಿ ಹಣ್ಣು  ಸಹಾಯ ಮಾಡುತ್ತದೆ. ವಿಟಾಮಿನ್ ಎ, ಸಿ ಮತ್ತು ಕೆನಿಂದ ಭರಪೂರವಾಗಿದ್ದು, ದೇಹದಲ್ಲಿರುವ ವಿಷಾಂಶವನ್ನು ತೆಗೆದು ಹಾಕುತ್ತದೆ. ರೋಗಗಳ ವಿರುದ್ಧ ಹೋರಾಡಿ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

ಇನ್ನು ಬ್ಯೂಟಿಶಿಯನ್, ಡಯಟೀಶಿಯನ್್ಗಳು ಕೊಡುವ ಸಲಹೆ ಅಂದ್ರೆ ಪ್ರತಿದಿನ ಬೆಳಿಗ್ಗೆ ಎದ್ದು ಪಪ್ಪಾಯಿ ಹಣ್ಣು ತಿನ್ನಿ. ಇದರಿಂದ ನಿಮ್ಮ ಸೌಂದರ್ಯ ಅಬಿವೃದ್ಧಿಯಾಗುತ್ತದೆ. ನಿಮ್ಮ ಕೇಶರಾಶಿ ಸುಂದರಗೊಳ್ಳುತ್ತದೆ. ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ. ನಿಮಗೆ ತಲೆ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಅದಕ್ಕೂ ಪರಿಹಾರ ಸಿಗುತ್ತದೆ ಅಂತಾ. ಇಷ್ಟೆಲ್ಲಾ ಲಾಭ ನೀಡುವ ಹಣ್ಣಾಗಿರುವ ಪಪ್ಪಾಯಿ ತಿಂದ್ರೆ ನಿಮಗೇನಾದ್ರೂ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ಸಲಹೆ ಪಡೆದು ನಂತರ ಪಪ್ಪಾಯಿ ಸೇವಿಸುವುದು ಉತ್ತಮ.

- Advertisement -

Latest Posts

Don't Miss