Sunday, June 22, 2025

Latest Posts

ಸಿಹಿ ಗೆಣಸನ್ನು ತಿಂದ್ರೆ ಆರೋಗ್ಯಕ್ಕೆ ಲಾಭಾನಾ ನಷ್ಟಾನಾ..?

- Advertisement -

ಸಿಹಿ ಗೆಣಸು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರು ಅದನ್ನ ಬೇಯಿಸಿ ತಿಂದ್ರೆ, ಇನ್ನು ಕೆಲವರು ಗೆಣಸನ್ನ ಸುಟ್ಟು ತಿಂತಾರೆ. ಹೇಗೆ ತಿಂದ್ರೂ ಟೇಸ್ಟ್ ಮಾತ್ರ ಸೂಪರ್ ಆಗಿರತ್ತೆ. ಆದ್ರೆ ಕೆಲವರಿಗೆ ಸಿಹಿ ಗೆಣಸಂದ್ರೆ ಅಲರ್ಜಿ. ಯಾಕಂದ್ರೆ ಕೆಲವರಿಗೆ ಅದನ್ನ ತಿನ್ನೋಂದ್ರಿಂದ ಕಾಲು ನೋವತ್ತೆ, ಹೊಟ್ಟೆ ನೋವಾಗತ್ತೆ. ಆದ್ರೆ ಸಿಹಿ ಗೆಣಸನ್ನ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಹಾಗಾದ್ರೆ ಆ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸಿಹಿ ಗೆಣಸನ್ನ ಬರೀ ಬೇಯಿಸಿ, ಸುಟ್ಟು ತಿನ್ನೋದಷ್ಟೇ ಅಲ್ಲ. ಪಲ್ಯ, ಸಾರು, ಸಾಂಬಾರ್ ಮಾಡೋಕ್ಕೂ ಬಳಸುತ್ತಾರೆ. ಬಜ್ಜಿ, ಬೋಂಡಾ ಸೇರಿ ಹಲವು ಥರದ ಸ್ನ್ಯಾಕ್ಸ್ ಕೂಡಾ ಸಿಹಿ ಗೆಣಸಿನಿಂದ ತಯಾರು ಮಾಡಲಾಗತ್ತೆ. ಅದೇ ರೀತಿ ಸಿಹಿ ಗೆಣಸನ್ನ ನಿಯಮಿತವಾಗಿ, ಹೆಚ್ಚು ಎಣ್ಣೆ, ಉಪ್ಪು, ಖಾರ ಹಾಕದೇ, ಬೇಯಿಸಿ ಅಥವಾ ಸುಟ್ಟು ತಿನ್ನುವುದರಿಂದಲೂ ಹಲವು ಲಾಭಗಳಿದೆ. ಮೂಳೆ ನೋವಿನಿಂದ ಅಥವಾ ಮೂಳೆ ರೋಗದಿಂದ ಬಳಲುತ್ತಿರುವವರು ಸಿಹಿ ಗೆಣಸಿನ ಸೇವನೆ ಮಾಡಿದ್ರೆ ಒಳ್ಳೆಯದು. ಇವರು ಸಿಹಿ ಗೆಣಸನ್ನ ತಿನ್ನೋದರಿಂದ ಬಹುಬೇಗ ಮೂಳೆ ನೋವಿನಿಂದ ಮುಕ್ತಿ ಪಡೆಯಬಹುದು.

ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದ್ದರೆ, ಅಂಥವರು ಸಿಹಿ ಗೆಣಸು ತಿನ್ನಬೇಕು. ವಿಟಾಮಿನ್ ಡಿಯನ್ನ ನಾವು ಸೂರ್ಯನ ಕಿರಣದಿಂದ ಪಡೆದುಕೊಳ್ಳುತ್ತೇವೆ. ಆ ಕಿರಣ ಬರುವುದು ಬೆಳಿಗ್ಗೆ 7ರಿಂದ 9 ಗಂಟೆ ಮತ್ತು ಸಂಜೆ 4ರಿಂದ 5ಗಂಟೆಯವರೆಗೂ. ಆ ಸಮಯದಲ್ಲಿ ನೀವು ಸೂರ್ಯನ ಕಿರಣಕ್ಕೆ ನಿಲ್ಲದಿದ್ದಲ್ಲಿ, ಸಿಹಿ ಗೆಣಸನ್ನು ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಇನ್ನು ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದಲ್ಲಿ, ಸಿಹಿ ಗೆಣಸು ಸೇವಿಸಿ. ಸಿಹಿ ಗೆಣಸಲ್ಲಿ ಐರನ್‌ ಪ್ರಮಾಣ ಹೆಚ್ಚಾಗಿದ್ದು, ಹಿಮೋಗ್ಲೋಬಿನ್ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಆದ್ರೆ ಇದನ್ನ ಗರ್ಭಿಣಿಯರು ಹೆಚ್ಚು ತಿನ್ನಬಾರದು.

ನಿಶ್ಯಕ್ತಿ ಮತ್ತು ಆಯಾಸವನ್ನು ದೂರ ಮಾಡುವಲ್ಲಿಯೂ ಇದು ಸಹಾಯ ಮಾಡುತ್ತದೆ. ನಿಮಗೆ ಬರೀ ಸಿಹಿ ಗೆಣಸು ತಿನ್ನಲು ಇಷ್ಟವಾಗದಿದ್ದಲ್ಲಿ, ಸಿಹಿ ಗೆಣಸಿನ ಚಾಟ್ ಮಾಡಿ ತಿನ್ನಿ. ಅದಕ್ಕೆ ಜಾಸ್ತಿ ಉಪ್ಪು, ಖಾರ ಹುಳಿಯನ್ನೆಲ್ಲ ಸೇರಿಸಬೇಡಿ. ಇದನ್ನ ತಿನ್ನುವುದರಿಂದ ಬರೀ ಆಯಾಸ, ನಿಶ್ಯಕ್ತಿ ಕಡಿಮಾಯೆಗುವುದಷ್ಟೇ ಅಲ್ಲ. ಬದಲಾಗಿ ನಿಮ್ಮ ತೂಕ ಕೂಡ ಇಳಿಯುತ್ತದೆ. ಆಲೂಗಡ್ಡೆ ಬಳಸುವ ಜಾಗದಲ್ಲಿ ನೀವು ಸಿಹಿ ಗೆಣಸು ಬಳಸಿಗೆ ಇನ್ನೂ ಉತ್ತಮ.

ಇನ್ನು ನಿಮಗೆ ಸಿಹಿ ಗೆಣಸು ತಿಂದ್ರೆ ಅಲರ್ಜಿ ಎಂದಾದ್ದಲ್ಲಿ ಈ ಬಗ್ಗೆ ವೈದ್ಯರ ಬಳಿ ಕೇಳಿ, ನಂತರ ಸಿಹಿ ಗೆಣಸು ಸೇವಿಸುವುದು ಉತ್ತಮ. ಸಿಹಿ ಗೆಣಸಿನ ಸೇವನೆಯಿಂದ ಹಲವರಿಗೆ ಹೊಟ್ಟೆ ಹಾಳಾಗುತ್ತದೆ. ಕೀಲು ನೋವು ಬರುತ್ತದೆ. ಅಂಥವರು ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಸಿಹಿ ಗೆಣಸು ಸೇವಿಸುವುದು ಉತ್ತಮ.

- Advertisement -

Latest Posts

Don't Miss