Health Tips: ಹಲವರಿಗೆ ಕೊನೆಯ ಸ್ಟೇಜ್ ತಲುಪುವವರೆಗೂ ಕ್ಯಾನ್ಸರ್ ಬಂದಿದೆ ಹೇಳಿ ಗೊತ್ತೇ ಆಗುವುದಿಲ್ಲ. ಕೊನೆಯ ಸ್ಟೇಜ್‌ಗೆ ಬಂದಾಗ, ದೇಹದಲ್ಲಾಗುವ ನೋವು ತಡೆಯಲಾಗದೇ, ಪರೀಕ್ಷೆ ನಡೆಸಿದಾಗಲೇ, ಅದು ಕ್ಯಾನ್ಸರ್ ಎಂದು ಗೊತ್ತಾಗುತ್ತದೆ. ಆದರೆ ನೀವು ಒಂದು ಲಕ್ಷಣದಿಂದ ನಿಮಗೆ ಕ್ಯಾನ್ಸರ್ ಇದೆಯಾ ಇಲ್ಲವಾ ಅಂತಾ ತಿಳಿಯಬಹುದು. ಆ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ಅವರು ವಿವರಿಸಿದ್ದಾರೆ.
ನಮ್ಮ ದೇಹದ ತೂಕ ಕಾರಣವಿಲ್ಲದೇ, ಕಡಿಮೆಯಾಗುತ್ತಲೇ ಹೋಗುತ್ತಿದೆ. ಎಷ್ಟೇ ಆಹಾರ ಸೇವಿಸಿದರೂ, ಸರಿಯಾಗಿ ನಿದ್ರಿಸಿದರೂ, ಆರೋಗ್ಯಕರ ಆಹಾರ ತಿಂದರೂ, ಖುಷಿಖುಷಿಯಾಗಿದ್ದರೂ ಕೂಡ ನಮ್ಮ ದೇಹದ ತೂಕ ಕಡಿಮೆಯಾಗುತ್ತಲೇ ಹೋಗುತ್ತಿದೆ ಎಂದಾಗ, ಒಮ್ಮೆ ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಏಕೆಂದರೆ, ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು ಅಂತಾರೆ ವೈದ್ಯರು.
ಹೌದು.. ಕ್ಯಾನ್ಸರ್ ಬಂದಾಗ, ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಒಂದೆರಡು ತಿಂಗಳಲ್ಲೇ 10 ಕೆಜಿವರೆಗೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ, ದೇಹದ ಕೆಲ ಭಾಗದಲ್ಲಿ ಜೋರಾದ ನೋವು ಕಾಣಿಸಿಕೊಳ್ಳುತ್ತದೆ. ಊಟ ತಿಂಡಿ ಸರಿಯಾಗಿ ಮಾಡಿದರೂ, ದೇಹದ ತೂಕ ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಲು ವೀಡಿಯೋ ನೋಡಿ.