Friday, October 18, 2024

Latest Posts

Health Tips: ಶೀತ-ನೆಗಡಿ ಕ್ಯಾನ್ಸರ್‌ಗೂ ಕಾರಣವಾಗಬಹುದು ಎಚ್ಚರ

- Advertisement -

Health Tips: ಶೀತ- ನೆಗಡಿ ಬಂದಾಗ, ಕೆಲವರು ಬೇಗ ವಾಸಿಯಾಾಗಬೇಕು ಎಂದು ಚಿಕಿತ್ಸೆ ಪಡೆಯುತ್ತಾರೆ. ಕೆಲವರು ಮನೆ ಮದ್ದಿನಿಂದಲೇ, ಕೆಲವೇ ದಿನಗಳಲ್ಲಿ ಆರೋಗ್ಯವಾಗುತ್ತಾರೆ. ಆದರೆ ಮತ್ತೆ ಕೆಲವರು ಬಂದ ಶೀತ ಹಾಗೇ ಹೋಗಲಿ ಎಂದು, ಬರೀ ನಿದ್ರೆ ಮಾಡುತ್ತಾರೆ. ಆದರೆ, ಅಂಥವರಿಗೆ ನೆಗಡಿ, ಕೆಮ್ಮು ಹೋದರೂ, ಅದರ ಕೆಟ್ಟ ಎಫೆಕ್ಟ್ ಮಾತ್ರ ಹಾಗೇ ಇರುತ್ತದೆ. ಇದರಿಂದ ಕ್ಯಾನ್ಸರ್ ಕೂಡ ಬರಬಹುದು ಅಂತಾರೆ ವೈದ್ಯರು.

ಪಾರಂಪರಿಕ ವೈದ್ಯರಾದ ಡಾ.ಪವಿತ್ರ ಅವರು ಈ ಬಗ್ಗೆ ವಿವರಿಸಿದ್ದು, ಜ್ವರ ಆವಾಗಾವಾಗ ಬರುವುದು, ಹೊಟ್ಟೆ ನೋವು, ವಾಂತಿ ಬೇಧಿ, ಮೈ ಕೈ ನೋವು ಹೆಚ್ಚಾಗುವುದೆಲ್ಲ ಆಗುತ್ತಿದ್ದರೆ, ಆ ಬಗ್ಗೆ ನಿರ್ಲಕ್ಷಿಸದೇ, ನಾವು ಸರಿಯಾದ ಚಿಕಿತ್ಸೆ ಪಡೆಯಬೇಕು ಅಂತಾರೆ ವೈದ್ಯರು. ಇಲ್ಲವಾದಲ್ಲಿ ಇದೇ ಸಾಮಾನ್ಯ ಆರೋಗ್ಯ ಸಮಸ್ಯೆ ಮಾರಣಾಂತಿಕ ಖಾಯಿಲೆಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ.

ಹಾಗಾಗಿ ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು ಅಂತಾರೆ ವೈದ್ಯರು. ಇನ್ನು ಪ್ರತಿದಿನ ಆರೋಗ್ಯಕರ ಆಹಾರ ಸೇವಿಸಬೇಕು. ತರಕಾರಿ, ಸೊಪ್ಪು, ಹಣ್ಣು, ಹಾಲು, ಹಾಲಿನ ಪ್ರಾಡಕ್ಟ್ ಸೇವಿಸುವುದು, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯ ಚೆನ್ನಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss