Monday, October 13, 2025

Latest Posts

Health Tips: ಜಾಸ್ತಿ ಉಸಿರಾಡೋದೂ ತೊಂದ್ರೇನೆ.. ಅಸ್ತಮಾ ಒಂದೊಳ್ಳೆ ಸಮಸ್ಯೆ!: Dr Bhavya Podcast

- Advertisement -

Health Tips: ಶ್ವಾಸಕೋಶದ ಸಮಸ್ಯೆಗೆ ಸಂಬಂಧಪಟ್ಟಂತೆ ಈಗಾಗಲು ಹಲವು ವಿವರಣೆ ನೀಡಿರುವ ಡಾ. ಭವ್ಯಾ ಅವರು, ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಂಚಿಕ“ಂಡಿದ್ದಾರೆ.

ವೈದ್ಯರು ಹೇಳುವ ಪ್ರಕಾರ ನೀವು ಬೆಂಗಳೂರಿನಂಥ ಜನಜಂಗುಳಿ ಪ್ರದೇಶದಲ್ಲಿರುವುದು ದಿನಕ್ಕೆ 5ರಿಂದ 6 ಸಿಗರೇಟ್ ಸೇದಿದಂತೆ. ಅಷ್ಟು ಕಲುಶಿತವಾಗಿದೆ ಬೆಂಗಳೂರು. ಹಾಗಾಗಿಯೇ ವಾರಕ್ಕೆ 1 ಬಾರಿಯಾದರೂ ಹಸಿರು ತುಂಬಿರುವ ಸ್ಥಳಕ್ಕೆ ಹೋಗಿ ನಾವು ಸಮಯ ಕಳೆಯಬೇಕು ಅಂತಾರೆ ವೈದ್ಯರು.

ಇನ್ನು ಚಿಕ್ಕ ಮಕ್ಕಳು ಕೂಡ ಅಸ್ತಮಾ, ಉಸಿರಾಡುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ವಿವರಿಸಿರುವ ವೈದ್ಯರು, ಮಕ್ಕಳನ್ನು ನಾವು ಅತೀ ಕ್ಲೀನ್ ಆಗಿ ಇರಿಸಿರುವುದೇ ಕಾರಣ ಅಂತಾರೆ ವೈದ್ಯರು. ಮುಂಚೆ ಎಲ್ಲ ನಾವು ಹೇಗೆ ಬೇಕೋ ಹಾಗೆ ಇರುತ್ತಿದ್ದೆವು. ಆದರೆ ಇಂದಿನ ಮಕ್ಕಳಿಗೆ ಆ್ಯಂಟಿ ಬಯೋಟಿಕ್ ಸೋಪ್, ಹ್ಯಾಂಡ್‌ವಾಶ್ ಇತ್ಯಾದಿ ಬಂದಿದೆ. ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯೇ ಕುಂದಿ ಹೋಗಿದೆ. ಹಾಗಾಗಿ ಇಂದಿನ ಮಕ್ಕಳು ಹೆಚ್ಚು ವೀಕ್ ಆಗುತ್ತಿದ್ದಾರೆ ಅಂತಾರೆ ವೈದ್ಯರು.

ಇಷ್ಟೇ ಅಲ್ಲದೇ ನಾವು ಇರುವ ಸ್ಥಳ, ಮನೆಯಲ್ಲೂ ಧೂಮಪಾನ ಮಾಡುವವರಿದ್ದರೆ ಹೀಗೆ ಹಲವು ಕಾರಣಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss