Wednesday, November 26, 2025

Latest Posts

Health Tips: ಮಕ್ಕಳಿಗೆ ಮಲಬದ್ಧತೆ? ಇದಕ್ಕೆ ಕಾರಣ? ಪರಿಹಾರ?

- Advertisement -

Health Tips: ನಿಮ್ಮ ಮಕ್ಕಳು ಬುದ್ಧಿವಂತರು, ಚೈತನ್ಯದಾಯಕರು, ಶಕ್ತಿವಂತರೂ ಆಗಬೇಕು ಅಂತಾ ನಿಮಗೂ ಆಸೆ ಇದೆಯಾ..? ಹಾಗಾದ್ರೆ ಅವರ ದಿನಚರಿ ಹೇಗಿರಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.

ಮಕ್ಕಳು ಓದುವುದರಲ್ಲೂ, ಸ್ಪೋರ್ಟ್ಸ್‌ನಲ್ಲೂ, ಬೇರೆ ಬೇರೆ ಕೆಲಸಗಳಲ್ಲೂ ಜಾಣರಾಗಿಬೇಕು ಅಂದ್ರೆ, ಅವರ ದಿನಚರಿ ಅತ್ಯುತ್ತಮವಾಗಿರಬೇಕು. ಅವರ ಆಹಾರ ಆರೋಗ್ಯಕರವಾಗಿರಬೇಕು. ಕಾಯಿಸಿ, ಆರಿಸಿದ ಶುದ್ಧ ನೀರಿನ ಸೇವನೆ ಮಾಡುವುದು ಕೂಡ ಮುಖ್ಯ ಅಂತಾರೆ ವೈದ್ಯರು.

ವೈದ್ಯರು ಹೇಳುವುದೇನೆಂದರೆ ಮಕ್ಕಳಿಗೆ ಟಿವಿ, ಸೆಲ್ಫೋನ್ ನೋಡುವ ಅಭ್ಯಾಸವೇ ಇರಬಾರದು. ಇದೇ ಅವರ ಜಾಣತನಕ್ಕೆ ಮಾರಕವಾಗುವುದು. ಫಿಸಿಕಲ್ ಆ್ಯಕ್ಟಿವಿಟಿ ಇರಬೇಕು. ಸ“ಪ್ಪು, ತರಕಾರಿ, ಎಳನೀರು, ಮಜ್ಜಿಗೆ, ಹಾಲು ಎಲ್ಲ ರೀತಿಯ ಆಹಾರ ನೀಡಬೇಕು. ಫೈಬರ್ ಇರುವ ಆಹಾರ ಸೇವಿಸಬೇಕು. ಬಾಳೆಹಣ್ಣು, ಪಪ್ಪಾಯಿ, ಕಿತ್ತಳೆ ಇದೆಲ್ಲ ಸೇವಿಸಬೇಕು.

ಇನ್ನು ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಬಗ್ಗೆ ಮಾತನಾಡಿರುವ ವೈದ್ಯರು, ವಾರದಲ್ಲಿ ಬರೀ 3 ಬಾರಿ ಮೋಷನ್ ಮಾಡುತ್ತದೆ. ತುಂಬಾ ಸಮಯ ಟಾಯ್ಲೆಟ್‌ನಲ್ಲೇ ಇರುತ್ತಾನೆ ಅಂದ್ರೆ ಅದು ಮಲಬದ್ಧತೆ ಸಮಸ್ಯೆ ಎಂದರ್ಥ. ಇದಕ್ಕೆ ಕಾರಣ ಜಂಕ್ ಫುಡ್. ಆದರೆ ಮಕ್ಕಳು ಫೈಬರ್ ಇರುವ ಆಹಾರ ಸೇವಿಸಬೇಕು. ನೀರು ಚೆನ್ನಾಗಿ ಕುಡಿಯಬೇಕು.

ಮೈದಾ, ಸಕ್ಕರೆ ಆಹಾರ ತಿನ್ನಬಾರದು. 5 ಸ“ಪ್ಪು, ತರಕಾರಿಯನ್ನು ಮಕ್ಕಳು ಸೇವಿಸಬೇಕು. 5 ರೀತಿಯ ಹಣ್ಣುಗಳನ್ನು ಸೇವಿಸಬೇಕು. ಸಿಹಿ ಪದಾರ್ಥ, ಕೋಕ್, ಪೆಪ್ಸಿ, ಜಂಕ್ ಫುಡ್ ಸೇವನೆ ನಿಲ್ಲಿಸಬೇಕು ಅಂತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss