Health Tips: ಇತ್ತೀಚಿಗೆ ಹಲವರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯುವುದಕ್ಕಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಅದನ್ನು ಬಾಡಿ ಡೆಟಾಕ್ಸ್ ಎನ್ನಲಾಗುತ್ತದೆ. ಆದನೆ ನಾವು 3 ವಸ್ತುಗಳನ್ನು ಬಳಸಿ, ನಮ್ಮ ಬಾಡಿ ಡೆಟಾಕ್ಸ್ ಮಾಡಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಬಾಲ್ದಿಯಲ್ಲಿ ಅಥವಾ ಬಕೇಟ್‌ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿ. ಅದರಲ್ಲಿ 1 ಸ್ಪೂನ್ ಆ್ಯಪಲ್ ಸೀಡರ್ ವಿನೇಗರ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 20 ನಿಮಿಷ ಆ ನೀರಿನಲ್ಲಿ ಕಾಲನ್ನು ಅದ್ದಿ ಕುಳಿತುಕ“ಳ್ಳಿ. ಆಗ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶ ನಿಮ್ಮ ಪಾದದ ಮೂಲಕ ಆಚೆ ಹೋಗುತ್ತದೆ.
ಬಿಸಿ ನೀರು ನಿಮ್ಮ ಪಾದದ ಪೋರ್ಸ್ ಓಪನ್ ಮಾಡಲು ಸಹಾಯಕರವಾಗಿದೆ. ಇದೇ ರಂಧ್ರದ ಮೂಲಕ ಈ ಮದ್ದು ನಿಮ್ಮ ದೇಹ ಸೇರಿ, ದೇಹ ಕ್ಲೀನ್ ಮಾಡುವ ಕೆಲಸ ಮಾಡುತ್ತದೆ.
ಇನ್ನು ಆ್ಯಪಲ್ ಸೀಡರ್ ವಿನೇಗರ್ ನಿಮ್ಮ ದೇಹದ ಪಿಹೆಚ್ ಬ್ಯಾಲೆನ್ಸ್ ಮಾಡಲು ಸಹಾಯಕವಾಗಿದೆ. ಇದು ಕೂಡ ದೇಹದಲ್ಲಿನ ವಿಷಕಾರಿ ಅಂಶ ಆಚೆ ಹಾಕುವ ಕೆಲಸ ಮಾಡುತ್ತದೆ. ವಾರದಲ್ಲಿ 1 ಬಾರಿ ಈ ನಿಯಮ ಅನುಸರಿಸಿದರೂ ಸಾಕು. ನಿಮ್ಮ ಪಾದ ಸ್ವಚ್ಛವಾಗುವುದಲ್ಲದೇ, ನಿಮ್ಮ ದೇಹದಲ್ಲಿನ ವಿಷಕಾರಿ ಅಂಶ ಆಚೆ ಹೋಗುತ್ತದೆ.




