Health Tips: ದೂರ ಪ್ರಯಾಣ ಮಾಡುವಾಗ ಮಕ್ಕಳಿಗೆ ಇಂಥ ಆಹಾರ ನೀಡಬೇಡಿ..!

Health Tips: ದೂರದೂರಿಗೆ ಪ್ರಯಾಣ ಮಾಡೋದು, ಅಥವಾ ಪ್ರವಾಸಕ್ಕೆ ಹೋಗೋದು ಎಷ್ಟು ಮಜವಾಗಿರತ್ತೆ ಅಲ್ವಾ..? ಆದರೆ ಚಿಕ್ಕ ಮಕ್ಕಳಿದ್ದರೆ, ಪ್ರಯಾಣದಲ್ಲಿ ಅಲ್ಲಲ್ಲಿ ಅಡೆತಡೆ ಬಂದೇ ಬರುತ್ತದೆ. ವಾಂತಿಯಾಗೋದು, ಉದರಬೇನೆ ಹೀಗೆ ಸಮಸ್ಯೆ ಶುರುವಾಗುತ್ತದೆ. ಹಾಗಾದ್ರೆ ನಿಮ್ಮ ಮಕ್ಕಳು, ಅಥವಾ ವಾಂತಿ ಸಮಸ್ಯೆ ಇದ್ದವರು ಪ್ರಯಾಣ ಮಾಡುವಾಗ ಕೆಲ ಆಹಾರಗಳನ್ನು ಸೇವಿಸಬಾರದು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ದೂರ ಪ್ರಯಾಣ ಅಥವಾ ಪ್ರವಾಸ ಅಂದ್ರೆ ಅಲ್ಲಿ ಪೇಟೆಯಲ್ಲಿ ಸಿಗುವ ಕುರುಕಲು ತಿಂಡಿಗಳಂತೂ ಇದ್ದೇ ಇರುತ್ತದೆ. ಇನ್ನು ರೆಸ್ಟೋರೆಂಟ್‌ಗೆ ಹೋದ್ರೆ ಕರಿದ ಪದಾರ್ಥ, ಪೂರಿ, ವಡೆ ಇಂಥದ್ದೇ ತಿನ್ನೋದು. ಅಲ್ಲದೇ, ಕೂಲ್ ಡ್ರಿಂಕ್ಸ್, ಜಂಕ್ ಫುಡ್ ಎಲ್ಲವೂ ಇರುತ್ತದೆ. ಆದರೆ ಮಕ್ಕಳಲ್ಲಿ ಜೀರ್ಣ ಶಕ್ತಿ ಕಡಿಮೆ ಇರುವ ಕಾರಣಕ್ಕೆ, ಇಂಥ ಆಹಾರವೆಲ್ಲ ನೀಡಬಾರದು.

ಬದಲಾಗಿ ಮನೆಯಲ್ಲೇ ಎಣ್ಣೆ, ಮಸಾಲೆ ಕಡಿಮೆ ಹಾಕಿ ತಯಾರಿಸಿದ ಖಿಚಡಿ, ಫುಲ್ಕಾ, ಓಟ್ಸ್, ಶರ್ಬತ್ತು, ಹಣ್ಣಿನ ಪ್ಯೂರಿ ಇಂಥ ಆಹಾರವನ್ನು ಪ್ಯಾಕ್ ಮಾಡಿರಿ. ಇಂಥ ಆಹಾರ ಸೇವನೆಯಿಂದ ಮಕ್ಕಳಿಗೆ ಉದರ ಸಮಸ್ಯೆ ಆಗುವುದಿಲ್ಲ.

About The Author