Parenting Tips: ಮುಂಚೆ ಎಲ್ಲಾ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ ಶಾಲೆಗೆ ಕಳುಹಿಸಲಾಗುತ್ತಿತ್ತು. ಆದರೀಗ 2 ವರ್ಷ ಆಗುತ್ತಿದ್ದಂತೆ, ಮಕ್ಕಳಿಗೆ ಪ್ಲೇ ಸ್ಕೂಲ್ ಕಳುಹಿಸದಿದ್ದಲ್ಲಿ, ಗೌರವದ ಪ್ರಶ್ನೆ ಎನ್ನಲಾಗುತ್ತಿದೆ. ಮೂರರಿಂದ ನಾಲ್ಕು ವರ್ಷಗಳ ಕಾಲ ಮನೆಯಲ್ಲೇ ಇದ್ದು, ಆರಾಮವಾಗಿ ಆಟವಾಡುತ್ತ ಇರಬೇಕಾದ ಮಕ್ಕಳನ್ನು ಪ್ರತಿಷ್ಟೆಗಾಗಿ ಶಾಲೆಗೆ ಸೇರಿಸಲಾಗುತ್ತದೆ. ಆದರೆ ಸರಿಯಾದ ವಯಸ್ಸಿಗೆ ಶಾಲೆಗೆ ಹಾಕಿದಾಗಲೇ ಮಕ್ಕಳು ಶಿಕ್ಷಣದ ಲಾಭ ಪಡೆಯುತ್ತಾರೆ. ಹಾಗಾದ್ರೆ ಯಾವ ವಯಸ್ಸಿಗೆ ಮಕ್ಕಳನ್ನು ಪ್ಲೇ ಸ್ಕೂಲ್ಗೆ ಹಾಕಬೇಕು ಅಂತಾ ತಿಳಿಯೋಣ ಬನ್ನಿ..
ಮಕ್ಕಳು 2ರಿಂದ 3 ವರ್ಷ ಮನೆಯಲ್ಲಿ ಆಡುತ್ತ, ಕುಣಿಯುತ್ತ, ಮನೆಯವರ ಜತೆ ಬೆರೆಯುತ್ತಲಿರಬೇಕು. 3 ವರ್ಷಕ್ಕೆ ಜನರ ಜತೆ ಬೆರೆಯಲು ಕಲಿಸಬೇಕು. ಹಾಗಾಗಿ ನೀವು ಮಕ್ಕಳಿಗೆ 3 ವರ್ಷ ತುಂಬಿದ ಬಳಿಕ ಪ್ಲೇಸ್ಕೂಲ್ಗೆ ಹಾಕಬಹುದು. ಪ್ಲೇಸ್ಕೂಲ್ನಲ್ಲಿ ಬಣ್ಣಗಳು, ಸಂಖ್ಯೆಗಳು,ಪದ್ಯಗಳನ್ನೆಲ್ಲ ಹೇಳಿಕ“ಡುತ್ತಾರೆ. 3 ವರ್ಷಕ್ಕೆ ಮಕ್ಕಳು ಎಲ್ಲವನ್ನೂ ಕಲಿಯುವ ಸಾಮರ್ಥ್ಯ ಇರುವುದರಿಂದ 3 ವರ್ಷವಾದ ಬಳಿಕ ಅವರನ್ನು ಪ್ಲೇ ಸ್ಕೂಲ್ಗೆ ಹಾಕಬಹುದು.
ಮಕ್ಕಳು ಖುಷಿ ಖುಷಿಯಾಗಿ ಶಾಲೆಗೆ ಹೋಗುತ್ತಿದ್ದರೆ ಓಕೆ. ಇಲ್ಲವಾದಲ್ಲಿ ಅವರನ್ನು ಪ್ಲೇಸ್ಕೂಲ್ಗೆ ಹೋಗಲು ಫೋರ್ಸ್ ಮಾಡಬೇಡಿ. ಹೀಗೆ ಮಾಡಿದ್ದಲ್ಲಿ ಮಕ್ಕಳ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಏಕೆಂದರೆ ಕೆಲ ಮಕ್ಕಳು 4 ತುಂಬಿದರೂ ಮನೆಯಿಂದ ಆಚೆ ಹೋಗಲು ಕೇಳುವುದಿಲ್ಲ. ಹಾಗಾಗಿ ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗಲು ನೀವು ಅವರಿಗೆ ಸಮಯ ನೀಡುವುದು ತುಂಬಾ ಮುಖ್ಯವಾಗುತ್ತದೆ.




