Health Tips: ಪ್ರತೀ ತಿಂಗಳು ಪಿರಿಯಡ್ಸ್ ಆದಾಗ, ಎಲ್ಲ ಮಹಿಳೆಯರು ಹಲವು ರೀತಿಯ ಆರೋಗ್ಯ ಸಮಸ್ಯೆ, ಕಿರಿಕಿರಿ ಅನುಭವಿಸುತ್ತಾರೆ., ಅಂಥ ನೋವಲ್ಲಿ ಹೊಟ್ಟೆ ನೋವು ಕೂಡಾ 1. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..
ನೀವು ನಿಮ್ಮ ಹೊಟ್ಟೆಯ ಮೇಲೆ ಉಗುರು ಬೆಚ್ಚಗಿನ ನೀರಿನ ಬ್ಯಾಗ್ ಇರಿಸಿ. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಆದರೆ ನೀರು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗಿರಬಾರದು ಅಷ್ಟೇ.
ಮುಟ್ಟಾದಾಗಲೇ ನೀವು 1 ಸ್ಪೂನ್ ಸೋಂಪು, ಚಿಕ್ಕ ತುಂಡು ಚಕ್ಕೆ, ಶುಂಠಿ ಇವೆಲ್ಲವನ್ನೂ ಗುದ್ದಿ, 2 ಗ್ಲಾಸ್ ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ, ಕಶಾಯ ಮಾಡಿಡಿ. ಉಗುರು ಬೆಚ್ಚಗಾದ ಬಳಿಕ, ಸ್ವಲ್ಪ ಸ್ವಲ್ಪ ಕುಡಿಯುತ್ತಿರಿ. ಇದರಿಂದ ಕೂಡ ಮುಟ್ಟಿನ ಹೊಟ್ಟೆನೋವಿಗೆ ಪರಿಹಾರ ಸಿಗುತ್ತದೆ.
ಅಲ್ಲದೇ ದೇಹಕ್ಕೆ ತಂಪು ನೀಡುವ ಹಣ್ಣು, ಎಳನೀರಿನ ಸೇವನೆ ಮಾಡಿ. ಡೈರಿ ವಸ್ತುಗಳನ್ನು ಹೆಚ್ಚು ಬಳಸಬೇಡಿ. ಬೇಕರಿ ತಿಂಡಿ, ಸಿಹಿ ತಿಂಡಿ, ಕರಿದ ಪದಾರ್ಥಗಳ ಸೇವನೆ ಈ ದಿನಗಳಲ್ಲಿ ಮಾಡಬೇಡಿ.