Saturday, June 21, 2025

Latest Posts

Health Tips: ಸಿಹಿ ಗೆಣಸು ಆರೋಗ್ಯಕ್ಕೆ ಅದೆಷ್ಟು ಉತ್ತಮ ಗೊತ್ತಾ..?

- Advertisement -

Health Tips: ಸಿಹಿ ಗೆಣಸು ಅಂದ್ರೆ ಕೆಲವರಿಗೆ ಬಲು ಇಷ್ಟ, ಇನ್ನು ಕೆಲವರಿಗೆ ಇಷ್ಟವಿರದ ತರಕಾರಿ. ಯಾಕಂದ್ರೆ, ಸಿಹಿ ಗೆಣಸು ತಿಂದ್ರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ ಎಂಬ ಕಾರಣಕ್ಕೆ, ಕೆಲವರು ಸಿಹಿ ಗೆಣಸು ತಿನ್ನುವುದಿಲ್ಲ. ಆದರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿಗೆ. ಅದೇನು ಅಂತಾ ತಿಳಿಯೋಣ ಬನ್ನಿ..

ಶುಗರ್ ಇದ್ದವರು ಕೂಡ ಸಿಹಿ ಗೆಣಸಿನ ಸೇವನೆ ಮಾಡಬಹುದು. ಆದರೆ ಲಿಮಿಟಿನಲ್ಲಿ ಸಿಹಿಗೆಣಸಿನ ಸೇವನೆ ಮಾಡಬೇಕು.  ಆದರೆ ಶುಗರ್ ಲೆವಲ್ ಹೆಚ್ಚಾಗಿದ್ದಲ್ಲಿ, ಸಿಹಿ ಗೆಣಸಿನ ಸೇವನೆ ಮಾಡಲೇಬಾರದು. ಇನ್ನು ಸಿಹಿ ಗೆಣಸನ್ನು ಯಾಕೆ ಶುಗರ್ ಇದ್ದವರು ಮಿತವಾಗಿ ಸೇವಿಸಬಹುದು ಎಂದರೆ, ಇದು ದೇಹದಲ್ಲಿ ನಿಧಾನವಾಗಿ ಗ್ಲುಕೋಸ್ ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತದೆ.

ಇನ್ನು ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆ ಇದೆ ಅಂತಾ ಅನ್ನಿಸಿದರೆ, ನೀವು ಸಿಹಿ ಗೆಣಸನ್ನು ಸೇವನೆ ಮಾಡಬೇಕು. ಇದರಿಂದ ಹಲ್ಲುಗಳು ಮತ್ತು ಮೂಳೆಗಳು ಗಟ್ಟಿಯಾಗುತ್ತದೆ. ದೇಹಕ್ಕೆ ಭರಪೂರ ಕ್ಯಾಲ್ಶಿಯಂ ಸಿಗುತ್ತದೆ. ನೀವು ಸಂತಾನ ಪಡೆಯಬೇಕು ಅಂತಿದ್ದರೆ, ಪತಿ ಪತ್ನಿ ಇಬ್ಬರೂ ಮಿತವಾಗಿ ಸಿಹಿ ಗೆಣಸಿನ ಸೇವನೆ ಮಾಡುತ್ತಿರಿ. ಯಾಕಂದ್ರೆ ತಂದೆ ತಾಯಿಯ ದೇಹದಲ್ಲಿ ಕ್ಯಾಲ್ಶಿಯಂ ಚೆನ್ನಾಗಿದ್ದಾಗ, ಮಗು ಅಂಗವೈಕಲ್ಯ ಹೊಂದುವುದಿಲ್ಲ. ಮತ್ತು ಮಗು ಆರೋಗ್ಯವಾಗಿ, ಗಟ್ಟಿಮುಟ್ಟಾಗಿ ಇರುತ್ತದೆ.

ಇನ್ನು ದಾಳಿಂಬೆ, ಕ್ಯಾರೆಟ್ ತಿಂದರೆ ಹೇಗೆ ಕಣ್ಣು ಶಾರ್ಪ್ ಆಗುತ್ತದೆಯೋ, ಅಂತೆಯೇ ಸಿಹಿ ಗೆಣಸಿನ ಸೇವನೆ ಮಾಡಿದಾಗಲೂ, ನಮ್ಮ ಕಣ್ಣಿನ ದೃಷ್ಟಿ ಸ್ಪಷ್ಟವಾಗುತ್ತದೆ. ಹಾಗಾಗಿ ಮಕ್ಕಳಿಗೆ ಮಾರುಕಟ್ಟೆಯಲ್ಲಿ ಸಿಗುವ ಸ್ನ್ಯಾಕ್ಸ್ ಕೊಡುವ ಬದಲು, ಗೆಣಸನ್ನೇ ಬೇಯಿಸಿ ಕೊಡುವುದು ಉತ್ತಮ. ಅವುಗಳ ದೃಷ್ಟಿದೋಷವೆಲ್ಲ ನಿವಾರಣೆಯಾಗುತ್ತದೆ.

ಬಿಪಿ ಇದ್ದವರು ಸಿಹಿ ಗೆಣಸು ತಿಂದರೆ, ಬಿಪಿ ಕಂಟ್ರೋಲಿಗೆ ಬರುತ್ತದೆ. ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಸಿಹಿ ಗೆಣಸಿನ ಸೇವನೆ ಮಾಡಿ. ಇನ್ನೂ ಹಲವು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಗೆಣಸು ಸಹಕಾರಿಯಾಗಿದೆ. ಎಲ್ಲವೂ ಮಿತವಾಗಿ ತಿಂದರೆ, ಔಷಧದಂತೆ ಕೆಲಸ ಮಾಡುತ್ತದೆ. ಹಾಗಾಗಿ ಎಲ್ಲ ಉತ್ತಮ ಆಹಾರಗಳ ಸೇವನೆ ಮಿತವಾಗಿರಲಿ.

- Advertisement -

Latest Posts

Don't Miss