Health Tips: ಮೊದಲಿನ ಕಾಲದಿಂದ ಹಿರಿಯರು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೇಳುವ ಆರೋಗ್ಯ ಪದ್ಧತಿ ಅಂದ್ರೆ, ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯನತೆ ಮತ್ತು ರಾತ್ರಿ ಆಳಿನಂತೆ ತಿನ್ನಬೇಕು ಎಂದು ಹೇಳಿದ್ದಾರೆ. ಇದರ ಅರ್ಥ ರಾತ್ರಿ ಮಲಗುವ ವೇಳೆ ಹೊಟ್ಟೆ ತುಂಬ ತಿನ್ನದೇ, ಲೈಟ್ ಆಗಿ, ಆರೋಗ್ಯಕರವಾದ ಆಹಾರ ಸೇವಿಸಬೇಕು ಎಂದು. ಹಾಗಾದ್ರೆ ರಾತ್ರಿ ಹೊತ್ತು ಎಂಥ ಆಹಾರಗಳನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.
ಕಾಫಿ, ಟೀ: ಬೆಳಿಗ್ಗೆ ತಿಂಡಿ ತಿಂದ ಬಳಿಕ ನಾವೆಲ್ಲ ಟೀ, ಕಾಫಿ ಕುಡಿಯುತ್ತೇವೆ. ಏಕೆ ಕುಡಿಯುತ್ತೇವೆ ಅಂದ್ರೆ, ನಮ್ಮ ನಿದ್ದೆ ಹಾರಿ ಹೋಗಲಿ, ನಾವು ಚೈತನ್ಯದಾಯಕವಾಗಿ ದಿನ ಶುರು ಮಾಡಲಿ ಎಂದು ಕಾಫಿ, ಟೀ ಕುಡಿಯುತ್ತೇವೆ. ಆದರೆ ರಾತ್ರಿ ಮಲಗುವ ಮುನ್ನ ನೀವು ಕಾಫಿ, ಟೀ ಕುಡಿದರೆ, ನಿದ್ರಾಹೀನತೆಯಿಂದ ಬಳಲಬೇಕಾಗುತ್ತದೆ. ಆರೋಗ್ಯಕ್ಕೂ ಇದು ಉತ್ತಮವಲ್ಲ.
ಜಂಕ್ ಫುಡ್, ಬೇಕರಿ ತಿಂಡಿ: ಬರ್ಗರ್, ಪಿಜ್ಜಾ, ಬ್ರೆಡ್, ಕೇಕ್ ಇತ್ಯಾದಿ ಆಹಾರದಲ್ಲಿ ಮೈದಾ, ಸಕ್‌ಕರೆ ಬಳಕೆ ಮಾಡಲಾಗುತ್ತದೆ. ಅಲ್ಲದೇ, ಇದನ್ನು ಬೇಕ್ ಮಾಡಿ, ತಯಾರು ಮಾಡಲಾಗಿರುತ್ತದೆ. ಇಂಥ ಆಹಾರ ಸೇವನೆ ಮಾಡುವುದರಿಂದ, ನಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗುವುದಲ್ಲದೇ, ನಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.
ಕರಿದ ತಿಂಡಿ: ರಾತ್ರಿ ಹೊತ್ತು ಪೂರಿ, ಸಮೋಸಾ, ಕಚೋರಿ, ಪಾನೀಪುರಿ ಸೇರಿ ಹಲವು ಕರಿದ ತಿಂಡಿಗಳ ಸೇವನೆ ಮಾಡಬಾರದು. ಎಣ್ಣೆಯಲ್ಲಿ ಕರಿದ ಯಾವುದೇ ತಿಂಡಿಯನ್ನು ಅಗತ್ಯಕ್ಕಿಂತ ಹೆಚ್ಚು, ಅದರಲ್ಲೂ ರಾತ್ರಿ ಹೊತ್ತು ಸೇವಿಸಿದರೆ, ಜೀರ್ಣಕ್ರಿಯೆ ಹಾಳಾಗುವುದು, ಗ್ಯಾಸ್ಟಿಕ್ ಸಮಸ್ಯೆ ಉದ್ಭವಿಸುವ ಎಲ್ಲಾ ಸಾಧ್ಯತೆಗಳಿರುತ್ತದೆ.
ಕೂಲ್ ಡ್ರಿಂಕ್ಸ್, ಹಾಟ್ ಡ್ರಿಂಕ್ಸ್: ರಾತ್ರಿ ಮಲಗುವ ಮುನ್ನ ಶರಾಬು ಕುಡಿಯುವವರನ್ನು ನೀವು ನೋಡಿರುತ್ತೀರಿ. ಆದರೆ ರಾತ್ರಿ ಹೊತ್ತು ಕೂಲ ಡ್ರಿಂಕ್ಸ್ ಆಗಲಿ ಹಾಟ್ ಡ್ರಿಂಕ್ಸ್ ಆಗಲಿ ಏನೇ ಸೇವಿಸಿದರೂ, ಅದರಿಂದ ನಿಮ್ಮ ಆರೋಗ್ಯಕ್ಕೆ ಪೆಟ್ಟು ಬೀಳೋದಂತೂ ಗ್ಯಾರಂಟಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಹಾಳಾಗಿ ಹೋಗುತ್ತದೆ.