Health Tips: ಕೆಲವರು ಇದ್ದಕ್ಕಿದ್ದಂತೆ ತಲೆಸುತ್ತು ಬಂದು ಬೀಳುತ್ತಾರೆ. ವಾಹನ ಚಲಾಯಿಸುವಾಗ, ಭಾಷಣ ಮಾಡುವಾಗ, ಅಥವಾ ಸುಮ್ಮನೆ ನಿಂತಾಗಲೂ ಕೆಲವರು ತಲೆಸುತ್ತು ಬಂದು ಬೀಳುವುದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಹೀಗೆ ಇದ್ದಕ್ಕಿದ್ದ ಹಾಗೆ ತಲೆಸುತ್ತು ಬಂದು ಬೀಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಪಾರಂಪರಿಕ ವೈದ್ಯೆ, ಡಾ.ಪವಿತ್ರಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಅಧಿಕ ಪಿತ್ತದೋಷದಿಂದ ಈ ರೀತಿ ಆಗಾಗ ತಲೆಸುತ್ತು ಬರುತ್ತದೆ. ನಾವು ಸೇವಿಸುವ ಆಹಾರದಿಂದಲೇ ಈ ಪಿತ್ತ ದೋಷ ಬರುತ್ತದೆ. ಕಾಫಿ, ಟೀ ಸೇವನೆ ಅತಿಯಾದಾಗ, ಪಿತ್ತದ ಸಮಸ್ಯೆ ಉದ್ಭವವಾಗುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದರಿಂದ ಪಿತ್ತ ದೋಷ ಉಂಟಾಗುತ್ತದೆ.
ಏಕೆಂದರೆ, ಟೀ, ಕಾಫಿ ಸೇವನೆಯಿಂದ ನೀವು ಸೇವಿಸುವ ಆಹಾರದಲ್ಲಿ ಪಿತ್ತ ಉತ್ಪತ್ತಿಯಾಗುತ್ತದೆ. ಹಾಗಾಗಿ ತಲೆಸುತ್ತು ಬರುವ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಪದೇ ಪದೇ ತಲೆಸುತ್ತು ಬರುತ್ತಿದ್ದರೆ, ಟೀ, ಕಾಫಿ ಸೇವನೆ ಬಿಟ್ಟಾಗ, ನಿಮ್ಮ ಪಿತ್ತಸಮಸ್ಯೆ ಕಡಿಮೆಯಾಗುತ್ತದೆ. ಬಳಿಕ ನೀವು ರಾತ್ರಿ ಕೊಂಚ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಎದ್ದು ಅದನ್ನು ನೀರಿಗೆ ಹಾಕಿ, ಬೆಲ್ಲ, ಏಲಕ್ಕಿ ಪುಡಿ ಹಾಕಿ, ಹುಣಸೆಹಣ್ಣಿನ ಜ್ಯೂಸ್ ತಯಾರಿಸಿಕೊಂಡು ಕುಡಿಯಿರಿ.
ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದ ಬಳಿಕ, ಮಲವಿಸರ್ಜನೆ ಮಾಡಿ. ಇದಾದ ನಂತರ ಹೊಟ್ಟೆ ಖಾಲಿ ಇರಬಾರದು. ತಿಂಡಿ ತಿನ್ನಬೇಕು. ಆದರೆ ಕಾಫಿ, ಟೀ ಸೇವನೆ ನಿಲ್ಲಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.