Health Tips: ತಾಾಮ್ರದ ತಂಬಿಗೆ ಅಥವಾ ಪಾತ್ರೆಯಲ್ಲಿ ರಾತ್ರಿಯಿಡೀ ನೀರನ್ನು ಇರಿಸಿ, ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ತಾಮ್ರದ ತಂಬಿಗೆಯಲ್ಲಿರಿಸಿದ ನೀರನ್ನು ಅಗತ್ಯಕ್ಕಿಂತ ಹೆಚ್ಚು ಕುಡಿದರೆ, ನಮ್ಮ ಆರೋಗ್ಯಕ್ಕೆ ಅಪಾಯವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಈಗ ತಾಮ್ರದ ಬಾಟಲಿಯೇ ಬಂದಿದೆ. ಹಾಗಾಗಿ ಜನ ಇಡೀ ದಿನ ತಾಮ್ರದ ಬಾಟಲಿಯಲ್ಲಿರಿಸಿದ ನೀರನ್ನೇ ಕುಡಿಯುತ್ತಿದ್ದಾರೆ. ಆದರೆ ಇದು ದೇಹಕ್ಕೆ ಅಪಾಯಕಾರಿಯಾಗಿದೆ.
ರಾತ್ರಿಯಿಡೀ ತಾಮ್ರದ ಬಾಟಲಿಯಲ್ಲಿ ಇರಿಸಿದ ನೀರಿನಲ್ಲಿ ಬೆಳಿಗ್ಗೆ ತಿಂಡಿಗೂ ಮುಂಚೆ 1ರಿಂದ 2 ಗ್ಲಾಸ್ ನೀರು ಕುಡಿಯಬೇಕು. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೈ ಕಾಲು ನೋವು ಕಡಿಮೆಯಾಗುತ್ತದೆ. ಶಕ್ತಿ ಬರುತ್ತದೆ. ನಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹೀಗೆ ಅನೇಕ ಅನೇಕ ಆರೋಗ್ಯ ಪ್ರಯೋಜನವಾಗುತ್ತದೆ.
ಏಕೆಂದರೆ, ತಾಮ್ರದ ಪಾತ್ರೆಯಲ್ಲಿ ರಾತ್ರಿಯಿಡೀ ನೀರನ್ನು ಇರಿಸುವುದರಿಂದ ತಾಮ್ರದಲ್ಲಿ ಕೆಲವ ಪ್ರಮಾಣ ನೀರನ್ನು ಸೇರುತ್ತದೆ. ಹಾಗೆ ಸೇರಿದ ತಾಮ್ರದ ಅಂಶ ನಮ್ಮ ದೇಹ ಸೇರುತ್ತದೆ. ಇದೇ ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ.
ಆದರೆ ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ತಾಮ್ರ ಸೇರಿದರೆ, ನಿಮ್ಮ ಆರೋಗ್ಯವೇ ಹಾಳಾಗಬಹುದು. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ 2 ಗ್ಲಾಸ್ ಮಾತ್ರವೇ ತಾಮ್ರದ ನೀರನ್ನು ಬಳಸಿ, ಆರೋಗ್ಯವಾಗಿರಿ.