Health Tips: ನೀವು ತೂಕ ಇಳಿಸಲು ಪ್ರಯತ್ನಿಸುತ್ತೀದ್ದೀರಿ ಎಂದಲ್ಲಿ ನಾವಿವತ್ತು ನಿಮಗೆ ಸಿಂಪಲ್ ಆಗಿರುವ ಕಶಾಯದ ರೆಸಿಪಿ ಹೇಳಲಿದ್ದೇವೆ. ಆದರೆ ನೀವು ಯಾವುದಾದರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ. ಅಥವಾ ಗರ್ಭಿಣಿಯಾಗಿದ್ದೀರಿ ಅಥವಾ ನಿಮಗೆ ಈ ಕಶಾಯದಿಂದ ಅಲರ್ಜಿ ಎಂದರೆ, ವೈದ್ಯರ ಸಲಹೆ ಪಡೆದು ಬಳಿಕ ಈ ಕಶಾಯ ಸೇವನೆ ಮಾಡಬೇಕು.
ಯಾವ ಕಶಾಯ ಅಂದ್ರೆ ವೋಮದ ಕಶಾಯ ಅಥವಾ ಅಜ್ವೈನ್ ಕಶಾಯ. 1 ಸ್ಪೂನ್ ವೋಮವನ್ನು 1 ಗ್ಲಾಸ್ ನೀರಿಗೆ ಹಾಕಿ, ಚೆನ್ನಾಗಿ ಕುದಿಸಿ, ಆರಿಸಿ ಕುಡಿಯಿರಿ. ನೆನಪಿರಲಿ 1 ದಿನಕ್ಕೆ 1 ಸ್ಪೂನ್ ವೋಮ ಮಾತ್ರ ಬಳಸಬೇಕು.
ಬೆಳಿಗ್ಗೆ ತಿಂಡಿಗೂ ಮುನ್ನ ಈ ಕಶಾಯ ಸೇವನೆ ಮಾಡುವುದರಿಂದ ನಿಮ್ಮ ದೇಹದ ಬೊಜ್ಜು ಕಡಿಮೆಯಾಗುತ್ತದೆ. ನೀವು ತೂಕ ಇಳಿಸಲು ಡಯಟ್ ಮಾಡುತ್ತಿದ್ದಲ್ಲಿ ವ್ಯಾಯಾಮ ಮಾಡುವುದರ ಜತೆಗೆ ಈ ಕಶಾಯ ಸೇವನೆ ಮಾಡಿದರೆ ನಿಮ್ಮ ದೇಹದ ತೂಕ ಬೇಗ ಇಳಿಕೆಯಾಗುತ್ತದೆ.
ಇನ್ನು ಜೀರ್ಣಕ್ರಿಯೆ ಸಮಸ್ಯೆಗೂ ಪರಿಹಾರ ಸಿಗುತ್ತದೆ. ವೋಮದ ಕಶಾಯದಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೇ ಹೆಚ್ಚು ಹಸಿವಾಗುವುದಿಲ್ಲ.