Health Tips: ಕ್ಯಾನ್ಸರ್ ಬಗ್ಗೆ ಈಗಾಗಲೇ ನಾವು ನಿಮಗೆ ಹಲವು ಮಾಹಿತಿ ನೀಡಿದ್ದೇವೆ. ಹಲವು ವೈದ್ಯರು ನಿಮಗೆ ಕ್ಯಾನ್ಸರ್ ಎಂದರೇನು..? ಕ್ಯಾನ್ಸರ್ ಬರಲು ಕಾರಣವೇನು..? ಕ್ಯಾನ್ಸರ್ ಬಂದಾಗ ಕಾಣಿಸುವ ಲಕ್ಷಣಗಳೇನು..? ಕ್ಯಾನ್ಸರ್ ಬಂಂದಾಗ ನಾಾವು ತೆಗೆದುಕೊಳ್ಳಬೇಕಾದ ಮೊದಲ ಸ್ಟೆಪ್ ಏನು ಹೀಗೆ ಹಲವು ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ಅತೀ ಹೆಚ್ಚು ಬೆಲರುವುದು, ಅದರಲ್ಲೂ ರಾತ್ರಿ ಹೊತ್ತು ಅತೀ ಹೆಚ್ಚು ಬೆವರುವುದು ಕೂಡ ಕ್ಯಾನ್ಸರ್ ಲಕ್ಷಣವಂತೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ಡಾ.ಪವನ್ ಅವರು ಈ ಬಗ್ಗೆ ವಿವರಿಸಿದ್ದು, ಕ್ಯಾನ್ಸರ್ ಎನ್ನುವುದು ನಮ್ಮ ದೇಹದಲ್ಲಿರುವ ಅಬ್‌ನಾರ್ಮಲ್ ಗ್ರೌತ್ ಆಫ್ ಸೆಲ್ಸ್. ದೇಹದಲ್ಲಿ ಒಂದು ಕ್ಯಾನ್ಸರ್ ಕಣ ಹುಟ್ಟಿಕೊಂಡದರೆ, ಅದು ಹರಡುತ್ತ, ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬಂದು, ನಮ್ಮ ಜೀವವೇ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಮೊದಲ ಹಂತದಲ್ಲೇ ಕ್ಯಾನ್ಸರ್ ಚಿಕಿತ್ಸೆ ಶುರು ಮಾಡಬೇಕು.
ಪದೇ ಪದೇ ಜ್ವರ ಬರೋದು, ರಾತ್ರಿ ಹೊತ್ತು ಹೆಚ್ಚು ಬೆವರುವುದು, ದೇಹದಲ್ಲಿ ಗಡ್ಡೆ ಬೆಳೆದು ನೋವುಂಟಾಗುವುದು, ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತ ಹೋಗುವುದು, ಇದೆಲ್ಲ ಕ್ಯಾನ್ಸರ್ ಲಕ್ಷಣಗಳಾಗಿರುತ್ತದೆ. ಅಲ್ಲದೇ, ನಾವು ಆಹಾರ ಸೇವನೆ ಮಾಡುವಾಗಲೂ ಎಚ್ಚರಿಕೆಯಿಂದರಬೇಕಾಗುತ್ತದೆ. ಏಕೆಂದರೆ, ಕೆಲವೊಂದು ಆಹಾರ ಸೇವನೆಯಿಂದಲೂ ನಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.
ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ, ಪ್ಲಾಸ್ಟಿಕ್ ಕಪ್‌ಗಳಲ್ಲಿ, ಪ್ಲೇಟ್‌ಗಳಲ್ಲಿ, ಬಿಸಿ ಬಿಸಿ ಪದಾರ್ಥ ಹಾಕಿ, ಸೇವಿಸುವುದರಿಂದಲೂ ಕ್ಯಾನ್ಸರ್ ಬರುತ್ತದೆ. ಅಲ್ಲದೇ ಪ್ರಿಸರ್ವೇಟಿವ್ಸ್ ಬಳಸಿ ಮಾಡಿರುವಂಥ ಆಹಾರ ಸೇವನೆ ಹೆಚ್ಚು ಮಾಡಿದಾಗಲೇ ನಮಗೆ ಕ್ಯಾನ್ಸರ್ ಬರುತ್ತದೆ. ಏಕೆಂದರೆ, ಆಹಾರ ಕೆಡಬಾರದು ಎಂದು ಕೆಲವು ಕೆಮಿಕಲ್‌ಗಳನ್ನು ಆಹಾರದಲ್ಲಿ ಸೇರಿಸಲಾಗುತ್ತದೆ. ಈ ಕೆಮಿಕಲ್‌ಗಳು ನಮ್ಮ ದೇಹ ಸೇರಿದಾಗಲೇ ನಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.