Health Tips: ವೈದ್ಯರಾದ ಡಾ.ರೋಹಿತ್ ಮೈದೂರ್ ಅವರು ಕಾಮಾಲೆ ರೋಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಣ್ಣು, ಚರ್ಮ, ಮೂತ್ರ ಹಳದಿ ಬಣ್ಣಕ್ಕೆ ತಿರುಗಿದಾಗ, ನಿಮಗೆ ಕಾಮಾಲೆ ರೋಗ ಬರುತ್ತಿದೆ ಎಂದರ್ಥ. ಇವೆಲ್ಲ ಕಾಮಾಲೆ ಬರುವ ಸೂಚನೆಗಳು.
ಇದ ಜೊತೆ ಜ್ವರವೂ ಬರುತ್ತದೆ. ಊಟ ಸೇರುವುದಿಲ್ಲ. ಹಾಗಾದ್ರೆ ಕಾಮಾಲೆಯಾಗಲು ಕಾರಣವೇನು..? ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಲಿವರ್ ಅನಾರೋಗ್ಯಕ್ಕೀಡಾದಾಗಲೇ ನಮಗೆ ಕಾಮಾಲೆ ಬರುತ್ತದೆ. ಇದಕ್ಕೆ ಕಾರಣ ಅಂದ್ರೆ, ನಾವು ಸೇವಿಸುವ ಆಹಾರ ಅನಾರೋಗ್ಯಕರವಾಗಿದ್ದರೆ, ಮದ್ಯ ವ್ಯಸನಿಗಳಾಗಿದ್ದರೆ, ಹೀಗೆ ಹಲವು ಕಾರಣಗಳಿಂದ ಕಾಮಾಲೆ ಬರುತ್ತದೆ.
ಇನ್ನು ಕೆಲವು ಔಷಧಿಗಳು ನಮ್ಮ ದೇಹಕ್ಕೆ ಮ್ಯಾಚ್ ಆಗದಿದ್ದಲ್ಲಿ, ಅದರಿಂದಲೂ ಕಾಮಾಲೆ ಬರಬಹುದು ಅಂತಾರೆ ವೈದ್ಯರು. ಜೊತೆಗೆ ನಾವು ಸೇವಿಸುವ ನೀರು, ಶುದ್ಧವಾಗಿರಬೇಕು. ನಾವು ಕುಡಿಯುವ ನೀರು ಶುದ್ಧಾಗಿರದೇ ಹೋದಲ್ಲಿ ಆಗಲೂ ಕೂಡ ನಮಗೆ ಕಾಮಾಲೆ ಬರಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

