Health Tips: ಯಾರಿಗೆ ತಾನೇ ಯಂಗ್ ಆಗಿ ಕಾಣಬೇಕು ಅಂತಾ ಅನ್ನಿಸೋದಿಲ್ಲ..? ಎಲ್ಲರಿಗೂ ಚೆಂದವಾಗಿ, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಅಂತಾ ಅನ್ನಿಸೋದಿಲ್ಲ..? ಅದೇ ರೀತಿ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, 3 ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ಯಾವುದು ಆ 3 ನಿಯಮ ಅಂತಾ ತಿಳಿಯೋಣ ಬನ್ನಿ..
ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಕ್ಲೀನ್ ಮಾಡಿ. ಅಂದರೆ ಕ್ಲೆನ್ಸಿಂಗ್. ದಿನಪೂರ್ತಿ ನಿಮ್ಮ ಮುಖಕ್ಕೆ ಅಂಟಿರುವ ಧೂಳು ಹೋಗಬೇಕು ಅಂದ್ರೆ ನೀವು ರಾತ್ರಿ ಮಲಗುವಾಗ ನಿಮ್ಮ ಮುಖವನ್ನು ಉತ್ತಮ ಕ್ವಾಲಿಟಿಯ ಫೇಸ್‌ವಾಶ್ ಬಳಸಿ ಕ್ಲೀನ್ ಮಾಡಬೇಕು. ಮನೆಯಲ್ಲೇ ತಯಾರಿಸಿರುವ ಕಡಲೆ ಅಥವಾ ಹೆಸರು ಕಾಳಿನ ಹುಡಿಯಿಂದಲೂ ಮುಖ ಕ್ಲೀನ್ ಮಾಡಬಹುದು.
ಎರಡನೇಯದಾಗಿ ಮಾಯಿಶ್ಚರೈಸೇಶನ್. ಮುಖವನ್ನು ಮಾಯಿಶ್ಚರೈಸ್ ಮಾಡುವುದರಿಂದ, ಅದು ನಮ್ಮ ಮುಖವನ್ನು ಹೈಡ್ರೇಟ್ ಮಾಡುತ್ತದೆ. ಫೈನ್ ಲೈನ್ಸ್ ಕಡಿಮೆ ಮಾಡುತ್ತದೆ. ಮುಖದ ಕಾಂತಿ ಕಾಪಿಡುತ್ತದೆ.
ಮೂರನೇಯದಾಗಿ ಸನ್‌ಸ್ಕ್ರೀನ್ ಬಳಸಿ. ಸನ್‌ಸ್ಕ್ರೀನ್ ಸೂರ್ಯನ ಬಿಸಿಲಿನಿಂದ ನಿಮ್ಮ ತ್ವಚೆಯ ರಕ್ಷಣೆ ಮಾಡುತ್ತದೆ. ಇದೆಲ್ಲ ಚರ್ಮಕ್ಕೆ ಅಪ್ಲೈ ಆಗುವ ನಿಯಮಗಳು. ಇನ್ನು ಇದರ ಜತೆ ನೀವು ನೀರನ್ನು ಚೆನ್ನಾಾಗಿ ಕುಡಿಯಬೇಕು. ಮಜ್ಜಿಗೆ, ಎಳನೀರಿನ ಸೇವನೆ ಮಾಡಬೇಕು. ಹಸಿ ತರಕಾರಿ, ಹಣ್ಣಿನ ಸೇವನೆ ಮಾಡಬೇಕು. ಆರೋಗ್ಯಕರ ಆಹಾರ ಸೇವನೆ ಮಾಡಿ, ಮಸಾಲೆಯುಕ್ತ, ಕರಿದ, ಜಂಕ್ ಪದಾರ್ಥ ಸೇವನೆ ಮಿತವಾಗಿಸಿದರೆ, ನೀವು ಯಂಗ್ ಆಗಿ ಕಾಣುತ್ತೀರಿ.