Friday, November 22, 2024

Latest Posts

Health Tips: ವೃದ್ಧಾಪ್ಯದಲ್ಲಿ ಖುಷಿಯಾಗಿರಲು ಈ ಟಿಪ್ಸ್ ಅನುಸರಿಸಿ

- Advertisement -

Health Tips: ಮೊದಲಿನ ಕಾಲದಲ್ಲಿ ವೃದ್ಧಾಪ್ಯವೆಂದರೆ, ರಿಟೈರ್‌ಮೆಂಟ್ ತೆಗೆದುಕೊಂಡು, ಮಕ್ಕಳು- ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಹಾಯಾಗಿ ಜೀವನ ಕಳೆಯುವುದು ಅಂತಾಗಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮದುವೆಯಾದರೂ, ಅವರಿಗೆ ಮಕ್ಕಳಾಗಲು, ಒಂದಿಷ್ಟು ವರ್ಷ ಕಾಯಬೇಕು. ಕೆಲವರಿಗಂತೂ ಮಕ್ಕಳೇ ಬೇಡ. ಇಂಥ ಸಮಯದಲ್ಲಿ ಮೊಮ್ಮಕ್ಕಳ ಆಸೆಯನ್ನೇ ಬಿಡಬೇಕಾಗುತ್ತದೆ. ಅಲ್ಲದೇ, ಮಕ್ಕಳು ಮೊಮ್ಮಕ್ಕಳು ಇದ್ದರೂ ಕೂಡ, ಅಂಥವರು ಕೆಲಸದ ಕಾರಣದಿಂದ ತಂದೆ ತಾಯಿಯಿಂದ ದೂರ ನೆಲೆಸಿರುತ್ತಾರೆ. ಇಂಥ ಸಮಯದಲ್ಲಿ ವಯಸ್ಸಾದವರು ತಮ್ಮ ಖುಷಿ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕಾಗುತ್ತದೆ. ವೃದ್ಧಾಪ್ಯದಲ್ಲಿ ಜೀವನ ಹೇಗಿದ್ದರೆ, ಅತ್ಯುತ್ತಮಮವಾಗಿರುತ್ತದೆ ಅಂತಾ ತಿಳಿಯೋಣ ಬನ್ನಿ..

ಸದಾ ದೇವರಲ್ಲಿ ಭಕ್ತಿ ಮಾಡಿ: ರಿಟೈರ್‌ಮೆಂಟ್ ಆಯ್ತು, ವೃದ್ಧಾಪ್ಯ ಸಮೀಪಿಸುತ್ತಿದೆ ಎಂದಾಗ, ಹೆಚ್ಚೆಚ್ಚು ದೇವರ ಧ್ಯಾನ ಮಾಡುವುದು ಉತ್ತಮ. ಏಕೆಂದರೆ ದೇವರ ಧ್ಯಾನ ಮಾಡಿದರೆ, ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ. ಯಾರ ಯಾರದ್ದೋ ಮನೆ ವಿಷಯ ಮಾತನಾಡುವುದು. ನಕಾರಾತ್ಮಕ ಮನಸ್ಥಿತಿಯವರೊಂದಿಗೆ ಹರಟೆ ಹೊಡೆಯುವುದು. ಈ ಕೆಲಸಗಳಿಗಿಂತ ದೇವರಲ್ಲಿ ಭಕ್ತಿ ಮಾಡುವುದು, ಭಜನೆ ಮಾಡುವುದು ಎಷ್ಟೋ ಉತ್ತಮ.

ಮಕ್ಕಳ ಬಗ್ಗೆ ಚಿಂತಿಸುವುದನ್ನು ಬಿಡಿ: ಮಕ್ಕಳು ನಿಮ್ಮ ಜೊತೆ ಇರಲಿ ಅಥವಾ ದೂರವೇ ಇರಲಿ. ಅವರ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ. ಸದಾ ಅವರ ಒಳಿತನ್ನೇ ಬಯಸಿ. ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿ. ಅವರು ನಿಮ್ಮ ಬಳಿ ಬಂದು ಇರಬೇಕು ಅನ್ನುವ ಮನಸ್ಸಿದ್ದರೆ, ಒಮ್ಮೆ ಹೇಳಿ. ಆಗುವುದಿಲ್ಲವೆಂದಲ್ಲಿ, ಅದಕ್ಕೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ. ಇಲ್ಲವಾದಲ್ಲಿ, ಒಬ್ಬರೇ ಖುಷಿಯಾಗಿ ಇರಿ. ಯಾಕಂದ್ರೆ ನೀವು ಹೆಚ್ಚು ಚಿಂತೆ ಮಾಡಿದಷ್ಟು, ನಿಮ್ಮ ಆರೋಗ್ಯ ಹಾಳಾಗುತ್ತದೆ. ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಚಿಂತೆ ಮಾಡಿ ಫಲವಿಲ್ಲ. ನಿಮ್ಮ ಖುಷಿಯನ್ನು ನೀವು ಕಂಡುಕೊಳ್ಳಿ.

ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ: ವೃದ್ಧಾಪ್ಯ ಸಮೀಪಿಸಿದಾಗ, ಎಲ್ಲಕ್ಕಿಂತ ಮುಖ್ಯ ಅಂದ್ರೆ, ಆರೋಗ್ಯ. ನಾವು ನಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಂಡರೆ, ನೆಮ್ಮದಿಯನ್ನು ಕಾಣಬಹುದು. ಹಾಗಾಗಿಯೇ ಆರೋಗ್ಯವೇ ಭಾಗ್ಯ ಎಂದು ಹಿರಿಯರು ಹೇಳಿದ್ದಾರೆ. ಸಕಾರಾತ್ಮಕವಾಗಿ ಯೋಚಿಸಿ. ಪುಟ್ಟ ಮಕ್ಕಳೊಂದಿಗೆ ಸ್ನೇಹ ಮಾಡಿ. ವಾಕಿಂಗ್, ವ್ಯಾಯಾಮ ಮಾಡುತ್ತ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ.

ಸಾವಿನ ಬಗ್ಗೆ ಹೆದರಬೇಡಿ: ಸಾವಿನ ಬಗ್ಗೆ ಹೆದರಿ ಪ್ರಯೋಜನವಿಲ್ಲ. ನಿಮಗೆ ಸಾವು ಯಾವಾಗ ಸಂಭವಿಸಬೇಕೋ, ಆಗ ನೀವು ಬೇಡವೆಂದರೂ ಸಾವು ಸಂಭವಿಸುತ್ತದೆ. ಹಾಗಾಗಿ ಆದಷ್ಟು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಖುಷಿ ಖುಷಿಯಾಗಿರಲು ಪ್ರಯತ್ನಿಸಿ.

ಹಣದ ವಿಚಾರದಲ್ಲಿ ಎಚ್ಚರವಾಗಿರಿ: ನೀವು ದುಡಿದು ಹಣವನ್ನು ಪೂರ್ತಿಯಾಗಿ ಮಕ್ಕಳಿಗೆ ನೀಡುವುದು ಮೂರ್ಖತನ. ನಿಮ್ಮ ಖರ್ಚಿಗಾಗಿ ಹೆಚ್ಚು ಹಣವನ್ನೇ ನೀವು ಇರಿಸಿಕೊಳ್ಳಿ. ಆದರೆ ಅದನ್ನು ವಿನಾಕಾರಣ ಖರ್ಚು ಮಾಡುವುದು. ಅಗತ್ಯಕ್ಕಿಂಚ ಹೆಚ್ಚು ದಾನ ಮಾಡುವುದು. ಸಂಬಂಧಿಕರಿಗೆ ನೀಡುವುದು. ಈ ರೀತಿಯ ತಪ್ಪುಗಳನ್ನು ಮಾಡಬೇಡಿ. ಕೆಲವರು ವಯಸ್ಸಾಗಿದೆ ಎಂದೇ ನಿಮಗೆ ಹಣದ ವಿಷಯದಲ್ಲಿ ಮೋಸ ಮಾಡಲು ಬರಬಹುದು. ಇತ್ತೀಚೆಗೆ ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಹೆಚ್ಚು ಮೋಸವಾಗುತ್ತಿದೆ. ಹಾಗಾಗಿ ಹಣದ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ.

- Advertisement -

Latest Posts

Don't Miss