Saturday, April 19, 2025

Latest Posts

ಗರ್ಭಿಣಿಯರು ಮಾಡುವ ತಪ್ಪುಗಳಿವು.. ಎಂದಿಗೂ ಹೀಗೆ ಮಾಡಬೇಡಿ..

- Advertisement -

ಪ್ರತಿಯೊಂದು ಹೆಣ್ಣು ಮದುವೆಯ ನಂತರ ತನ್ನದೂ ಒಂದು ಸುಂದರ ಸಂಸಾರವಿರಬೇಕು. ಆ ಸಂಸಾರದಲ್ಲಿ ಪುಟ್ಟ ಮಗುವೊಂದಿರಬೇಕು ಅಂತಾ ಬಯಸುತ್ತಾಳೆ. ಇಂಥ ಸುಸಂದರ್ಭ ಬಂದಾಗ ಮಾತ್ರ ತಿಳಿಯದೇ ಕೆಲ ತಪ್ಪನ್ನು ಮಾಡ್ತಾರೆ. ಹಾಗೆ ನಿಮಗೆ ಗೊತ್ತಿಲ್ಲದೇ ಮಾಡುವ ತಪ್ಪು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅಂಥ ತಪ್ಪು ಮಾಡಬಾರದು. ಆದ್ದರಿಂದ ನಾವಿಂದು ನಿಮಗೆ ಗರ್ಭಾವಸ್ಥೆಯಲ್ಲಿದ್ದಾಗ ಮಾಡಬಾರದ ಕೆಲ ತಪ್ಪುಗಳ ಬಗ್ಗೆ ಹೇಳಲಿದ್ದೇವೆ.

ಮೊದಲನೇಯದಾಗಿ ನೀವು ಗರ್ಭಿಣಿಯಾಗಲು ರೆಡಿಯಾಗಿದ್ದೀರಿ ಎಂಬ ವಿಷಯ ಅರಿತ ಮೇಲೆ ನಿಮಗೆ ಮುಟ್ಟು ಆಗದಿದ್ದಲ್ಲಿ, ನೀವು ಆದಷ್ಟು ಬೇಗ ಅಮ್ಮನಾಗುತ್ತಿದ್ದೀರೋ ಇಲ್ಲವೋ ಅನ್ನೋದನ್ನ ಅರಿಯಬೇಕು. ತುಂಬಾ ಜನ ಈ ವಿಷಯದಲ್ಲಿ ತಪ್ಪು ಮಾಡ್ತಾರೆ. ಇದನ್ನ ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳದೇ ತುಂಬಾ ದಿನಗಳವರೆಗೂ ನಿರ್ಲಕ್ಷ್ಯದಿಂದ ಇರುತ್ತಾರೆ. ನಂತರ ಪ್ರೆಗ್ನೆನ್ಸಿ ವಿಷಯ ತಿಳಿಯುವಷ್ಟೊತ್ತಿಗೆ ತಾವು ಮಾಡಿದ ತಪ್ಪು ಅರಿವಾಗಿರುತ್ತದೆ. ಹಾಗಾಗಿ ನೀವು ಮುಟ್ಟಾಗುವುದು ತಪ್ಪಿದ್ದಲ್ಲಿ ಬೇಗ ಪ್ರೆಗ್ನೆನ್ಸಿ ಕಿಟ್‌ನಿಂದ ನೀವು ಅಮ್ಮನಾಗುತ್ತಿರುವ ವಿಷಯ ಖಾತ್ರಿಪಡಿಸಿಕೊಳ್ಳಿ.

ಎರಡನೇಯದಾಗಿ ಮೂರು ತಿಂಗಳವರೆಗೆ ಮಗು ನಾಜೂಕಾಗಿರುವುದರಿಂದ ನೀವು ಭಾರದ ವಸ್ತು ಎತ್ತುವ ಹಾಗಿಲ್ಲ. ಸಿಕ್ಕ ಸಿಕ್ಕ ತಿಂಡಿಗಳನ್ನ ತಿನ್ನುವ ಹಾಗಿಲ್ಲ. ಮತ್ತು ಪ್ರಯಾಣ ಮಾಡುವಾಗ ಹುಷಾರಾಗಿರಬೇಕು. ಆದ್ರೆ ಕೆಲವರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಬಾರದ ಬ್ಯಾಗ್ ಎತ್ತುವುದು, ಬೈಕ್‌ನಲ್ಲಿ ಓಡಾಡುವುದು, ಹೆಚ್ಚು ತಂಪು ಅಥವಾ ಹೆಚ್ಚು ಉಷ್ಣ ಪದಾರ್ಥವನ್ನು ತಿನ್ನುವುದು, ಜಿಮ್‌ಗೆ ಹೋಗುವುದು, ಪತಿ-ಪತ್ನಿ ಸೇರುವುದು ಇಂಥ ತಪ್ಪುಗಳನ್ನು ಮಾಡುತ್ತಾರೆ. ಆದ್ರೆ ಇದೆಲ್ಲ ಮಾಡುವುದರಿಂದ ನಿಮ್ಮ ಮೇಲೆ ಮತ್ತು ನಿಮಗೆ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.

ಮೂರನೇಯದಾಗಿ ಸಿಕ್ಕ ಸಿಕ್ಕ ಮಾತ್ರೆಗಳನನ್ನು ಸೇವಿಸುವುದು. ನೀವು ಗರ್ಭಿಣಿ ಹೌದೋ ಇಲ್ಲವೋ ಅನ್ನೋದನ್ನ ತಿಳಿದುಕೊಳ್ಳದೇ ಮುಟ್ಟಾಗಲು ಸಿಕ್ಕ ಸಿಕ್ಕ ಮಾತ್ರೆಗಳನ್ನ ಸೇವಿಸಬೇಡಿ. ಅಥವಾ ನೀವು ಗರ್ಭಾವಸ್ಥೆಯಲ್ಲಿದ್ದಾಗ, ನಿಮಗೆ ಶೀತ, ಕೆಮ್ಮು ಶುರುವಾಯಿತೆಂದು ನಿಮ್ಮಿಷ್ಟದಂತೆ ಮಾತ್ರೆಗಳನ್ನ ತೆಗೆದುಕೊಳ್ಳಬೇಡಿ. ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ಅವರ ಕೊಟ್ಟ ಗುಳಿಗೆಯನ್ನೇ ತೆಗೆದುಕೊಳ್ಳಿ.

ನಾಲ್ಕನೇಯದಾಗಿ   ನಿಮಗೆ ಮೊದಲೇ ಒಂದು ಮಗುವಿದ್ದರೆ, ಆ ಮಗುವನ್ನು ಹೆಚ್ಚು ಹೊತ್ತು ನೀವು ಹಿಡಿದುಕೊಳ್ಳಬಾರದು. ಅಥವಾ ನಿಮ್ಮ ಹೊಟ್ಟೆಯ ಮೇಲೆ ಕೂರಿಸಿಕೊಳ್ಳುವಂತಿಲ್ಲ. ಯಾಾಕಂದ್ರೆ ಹೀಗೆ ಮಾಡುವುದರಿಂದ ನಿಮ್ಮ ಗರ್ಭಕೋಶಕ್ಕೆ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ, ನೀವು ಮಲಗುವಾಗ ಕೂಡ ನಾಜೂಕಾಗಿ ಮಲಗಬೇಕು. ಹೇಗೆ ಬೇಕೋ ಹಾಗೆ ಮಲಗುವಂತಿಲ್ಲ. ಎಡಬದಿಗೆ ತಿರುಗಿ ಮಲಗಬೇಕು.                                           

ಐದನೇಯದಾಗಿ ನೀವು ಕಾರ್‌ನಲ್ಲಿ ಚಲಿಸುವಾಗ ಖಂಡಿತವಾಗಿಯೂ ಸೀಟ್ ಬೆಲ್ಟ್ ಹಾಕಿಕೊಳ್ಳಲೇಬೇಕು. ತುಂಬಾ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಸೀಟ್ ಬೆಲ್ಟ್ ಧರಿಸುವುದಿಲ್ಲ. ಯಾಕಂದ್ರೆ ಅದರಿಂದ ಮಗುವಿಗೆ ತೊಂದರೆಯಾಗಬಹುದೆಂದು. ಆದ್ರೆ ನೀವು ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆನೇ ಹೆಚ್ಚು ತೊಂದರೆಗೀಡಾಗುತ್ತೀರಿ.

ಆರನೇಯದಾಾಗಿ ಆಹಾರದ ವಿಷಯಕ್ಕೆ ಬಂದ್ರೆ ಹಸಿರು ತರಕಾರಿ, ಕಬ್ಬಿಣಾಂಶವಿರುವ ಆಹಾರ, ಡ್ರೈಫ್ರೂಟ್ಸ್ ತಿನ್ನಬೇಕು. ಐಸ್‌ಕ್ರೀಮ್, ಚಾಕೋಲೇಟ್ ಫ್ಲೇವರ್ ತಿಂಡಿಗಳನ್ನು ಆದಷ್ಟು ಅವೈಡ್ ಮಾಡಿ. ಹಣ್ಣುಗಳಲ್ಲಿ ಪಪ್ಪಾಯಿ ಹಣ್ಣು ಮತ್ತು ಅನಾನಸ್ ಹಣ್ಣುಗಳನ್ನು ತಿನ್ನಲೇಬೇಡಿ. ಎಳ್ಳು, ಖಾರಾ ತಿಂಡಿ, ಹಸಿ ಮೆಣಸಿನ ಪದಾರ್ಥ, ಹಸಿ ಮಾಂಸ, ಹಸಿ ಮೊಟ್ಟೆ, ಹಸಿ ಹಾಲನ್ನ ಕುಡಿಯಲೇಬೇಡಿ.

ಏಳನೇಯದಾಗಿ ಹೈಹೀಲ್ಸ್ ಚಪ್ಪಲಿಗಳನ್ನು ಧರಿಸಲೇಬೇಡಿ. ಗರ್ಭಾವಸ್ಥೆಯಲ್ಲಿ ಹೈಹೀಲ್ಸ್ ಚಪ್ಪಲಿ ಧರಿಸೋದು ತುಂಬಾನೇ ಡೇಂಜರ್. ಅಲ್ಲದೇ ಈ ವೇಳೆ ನೀವು ದೆವ್ವದ ಸಿನಿಮಾಗಳನ್ನ, ಹಾರರ್‌ ಸಿನಿಮಾಗಳನ್ನ, ಹಿಂಸೆಯಾಗುವಂಥ ಸಿನಿಮಾಗಳನ್ನ ನೋಡಲೇಬಾರದು. ಇದರಿಂದ ನಿಮ್ಮ ಮಗುವಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ.

ಎಂಟನೇಯದಾಗಿ ಹೆಚ್ಚು ಸೊಂಟ ಬಗ್ಗಿಸಬಾರದು. ಹೆಚ್ಚು ಬಾರಿ ಕೂತು ಎಳುವುದು, ಆಯಾಸವಾಗುವಂಥ ಕೆಲಸ ಮಾಡುವುದೆಲ್ಲ ಮಾಡಬಾರದು. ಗರ್ಭಿಣಿಯರು ಎಲ್ಲರಿಗಿಂತ ಎರಡು ಗಂಟೆ ಹೆಚ್ಚು ನಿದ್ದೆ ಮಾಡಬೇಕು ನಿಜ. ಆದ್ರೆ ಯಾವಾಗಲೂ ನಿದ್ದೆ ಮಾಡಿರಬಾರದು. ವಾಕಿಂಗ್ ಮಾಡಿ, ಆಪ್ತರೊಂದಿಗೆ ಮಾತನಾಡಿ, ಒಳ್ಳೊಳ್ಳೆಯ ಹಾಡು ಕೇಳಿ, ಸಿನಿಮಾ ನೋಡಿ, ಧ್ಯಾನ ಮಾಡಿ, ಹೀಗೆ ನಿಮಗೆ ಮನಸ್ಸಿಗೆ ಮುದ ನಿಡುವ ಕೆಲಸ ಮಾಡಿ.

- Advertisement -

Latest Posts

Don't Miss