Friday, December 27, 2024

Latest Posts

ನಿಮ್ಮ ಮೂಳೆ ಗಟ್ಟಿಗೊಳಿಸಲು ಈ ಆಹಾರಗಳನ್ನು ಸೇವಿಸಿ..

- Advertisement -

ನಾವು ಆರೋಗ್ಯಕರವಾಗಿರಬೇಕು. ಗಟ್ಟಿಮುಟ್ಟಾಗಿರಬೇಕು ಅಂದ್ರೆ ನಮ್ಮ ಮೂಳೆ ಗಟ್ಟಿಮುಟ್ಟಾಗಿರಬೇಕು. ಹಾಗೆ ಮೂಳೆ ಗಟ್ಟಿಮುಟ್ಟಾಗಿರಬೇಕು ಅಂದ್ರೆ ನಾವು ಅದಕ್ಕೆ ತಕ್ಕನಾದ ಆಹಾರವನ್ನು ತಿನ್ನಬೇಕು. ಹಾಗಾದ್ರೆ ನಾವು ಮೂಳೆ ಗಟ್ಟಿಯಾಗಿರಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ..

ಮೊದಲನೇಯದಾಗಿ ಮೊಸರು. ವಿಟಾಮಿನ್ ಮತ್ತು ಕ್ಯಾಲ್ಶಿಯಂ ಅಂಶವುಳ್ಳ ಮೊಸರನ್ನ ನಾವು ಪ್ರತಿದಿನ ಸೇವಿಸಬೇಕು. ಮೊಸರಿನ ಸೇವನೆಯಿಂದ ನಮ್ಮ ಮೂಳೆ ಗಟ್ಟಿಯಾಗುವುದಲ್ಲದೇ, ತ್ವಚೆ ಕ್ಲೀನ್ ಆಗುತ್ತದೆ. ಕೂದಲ ಬುಡ ಗಟ್ಟಿಮುಟ್ಟಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಅದಕ್ಕೂ ಪರಿಹಾರ ಸಿಗುತ್ತದೆ.

ಎರಡನೇಯದಾಗಿ ಪಾಲಕ್‌ ಸೊಪ್ಪು. ಶೇಂಗಾ ಚಿಕ್ಕಿ. ಪಾಲಕ್ ಸೊಪ್ಪಿನಿಂದ ಸೂಪ್, ಪಲ್ಯ, ಸಾರು, ಸಾಂಬಾರ್ ಮಾಡಬಹುದು. ಇನ್ನು ಶೇಂಗಾ ಚಿಕ್ಕಿ ಮಾಡುವಾಗ ಶೇಂಗಾ ಮತ್ತು ಬೆಲ್ಲವನ್ನು  ಸೇರಿಸಿ ಚಿಕ್ಕಿ ತಯಾರಿಸಿ. ಯಾವುದೇ ಕಾರಣಕ್ಕೂ ಸಕ್ಕರೆ ಬಳಸಬೇಡಿ. ಇವೆರಡು ಆಹಾರ ಸೇವನೆಯಿಂದ ನಮ್ಮ ಮೂಳೆ ಗಟ್ಟಿಗೊಳ್ಳುತ್ತದೆ. ಯಾಕಂದ್ರೆ ಈ ಎರಡು ಪದಾರ್ಥದಲ್ಲಿ ಕಬ್ಬಿಣಾಂಶ ಇರುತ್ತದೆ. ಇದರಿಂದ ನಮ್ಮ ಮೂಳೆ ಗಟ್ಟಿಗೊಳ್ಳುತ್ತದೆ.

ಮೂರನೇಯದಾಗಿ ಎಳ್ಳು ಮತ್ತು ಹಾಲು. ಎಳ್ಳು ಮತ್ತು ಬೆಲ್ಲ ಹಾಕಿ ಚಿಕ್ಕಿ ಮಾಡಿ ತಿನ್ನಬಹುದು. ಇದು ಉಷ್ಣ ಪದಾರ್ಥವಾಗಿದ್ದು, ದೇಹದಲ್ಲಿ ಶಕ್ತಿ ತುಂಬುತ್ತದೆ. ನೀವು ಡ್ರೈಫ್ರೂಟ್ಸ್ ಲಾಡು ಕೂಡಾ ತಿನ್ನಬಹುದು. ಅಂಟಿನ ಉಂಡೆ ತಿಂದರೂ ಮೂಳೆ ಗಟ್ಟಿಗೊಳ್ಳುತ್ತದೆ. ಯಾಕಂದ್ರೆ ಅಂಟಿನ ಉಂಡೆಯಲ್ಲಿ ಡ್ರೈಫ್ರೂಟ್ಸ್, ಕೊಬ್ಬರಿ, ಎಳ್ಳು, ಆಳ್ವಿ, ಅಂಟು ಎಲ್ಲವೂ ಇರುತ್ತದೆ. ಜೊತೆಗೆ ಬೆಲ್ಲ ಸೇರಿಸಿ ಉಂಡೆ ಮಾಡಿರುತ್ತಾರೆ. ಈ ಉಂಡೆ ತಿಂದರೆ ಶಕ್ತಿ ಬರುತ್ತದೆ. ಇನ್ನು ಪ್ರತಿದಿನ ಹಾಲು ಕುಡಿಯುವುದು ಒಳ್ಳೆಯದು. ಅದರಲ್ಲೂ ಬಿಸಿ ಬಿಸಿ ಹಾಲು ಕುಡಿಯುವುದು ಉತ್ತಮ. ಆದ್ದರಿಂದಲೇ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಹೆಚ್ಚು ಹಾಲು ಕುಡಿಯಬೇಕು ಅಂತಾ ಹೇಳಲಾಗುತ್ತದೆ.

ನಾಲ್ಕನೇಯದಾಗಿ ಬಾದಾಮಿ ಮತ್ತು ಬಾಳೆಹಣ್ಣು. ಬಾದಾಮಿ ಬೀಜವನ್ನು ಹಾಗೇ ತಿನ್ನುವ ಬದಲು, ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದರ ಸಿಪ್ಪೆ ತೆಗೆದು ತಿನ್ನಬೇಕು. ಆಗಲೇ ಅದರ ಪ್ರಯೋಜನವಾಗುತ್ತದೆ. ನೀವು ಬಾದಾಮಿ ಬೀಜದ ಸಿಪ್ಪೆ ತೆಗೆಯದೇ ತಿಂದ್ರೆ, ಅದರ ಸಿಪ್ಪೆ ನಮ್ಮ ದೇಹಕ್ಕೆ ಪೂರ್ತಿ ಪೋಷಕಾಂಶ ಸಿಗಲು ಬಿಡುವುದಿಲ್ಲ. ಹಾಗಾಗಿ ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದೇ ತಿನ್ನಿ. ಇನ್ನು ಬಾಳೆಹಣ್ಣು ಪಚನ ಕ್ರಿಯೆಗೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಅದರ ಜೊತೆಗೆ ಬಾಳೆಹಣ್ಣಿನ ಸೇವನೆಯಿಂದ ಮೂಳೆ ಕೂಡ ಗಟ್ಟಿಯಾಗುತ್ತದೆ. ಈ ಮೇಲೆ ತಿಳಿಸಿದ ಪದಾರ್ಥಗಳು ತಿಂದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss