Health Tips: ನೆನೆಸಿಟ್ಟ ಡ್ರೈಫ್ರೂಟ್ಸ್ ತಿನ್ನುವುದರಿಂದ ಎಲ್ಲರ ಆರೋಗ್ಯಕ್ಕೂ ಅತ್ಯುತ್ತಮ ಲಾಭವಿರುತ್ತದೆ. ಆದರೆ ನಿಮ್ಮ ಮಕ್ಕಳ ಆರೋಗ್ಯ ಚೆನ್ನಾಗಿರಬೇಕು. ನಿಮ್ಮ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಬೇಕು. ಚುರುಕಾಗಬೇಕು ಅಂದ್ರೆ, ನೀವು ನೆನೆಸಿಟ್ಟ ಅಖ್ರೋಟ್ ಸೇವನೆ ಮಾಡಬೇಕು. ಹಾಗಾದ್ರೆ ನೆನೆಸಿಟ್ಟ ಅಖ್ರೋಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.
ನೆನೆಸಿದ ಅಖ್ರೋಟನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನೆನೆಪಿನ ಶಕ್ತಿ ಉತ್ತಮವಾಗಿರುತ್ತದೆ. ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಬರೀ ಮಕ್ಕಳಿಗಷ್ಟೇ ಅಲ್ಲದೇ, ಗರ್ಭಿಣಿಯರಿಗೂ ಬೆಳಿಗ್ಗೆ ನೆನೆಸಿಟ್ಟ ಅಖ್ರೋಟ್ ತಿನ್ನಲು ಹೇಳಲಾಗುತ್ತದೆ. ಏಕೆಂದರೆ, ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿ, ಮಕ್ಕಳು ಆ್ಯಕ್ಟೀವ್ ಆಗಿರುತ್ತಾರೆ.
ಅಲ್ಲದೇ ಮಕ್ಕಳ ಹೃದಯದ ಆರೋಗ್ಯ ಸರಿಯಾಗಿ ಇರುವುದು ಇಂದಿನ ಕಾಲದಲ್ಲಿ ತುಂಬಾ ಮುಖ್ಯ. ವಾತಾವರಣದಿಂದಲೋ, ಆಹಾರ ದೋಷದಿಂದಲೋ, ಚಿಕ್ಕ ವಯಸ್ಸಿನಲ್ಲೇ ಹೃದ್ರೋಗ ಸಮಸ್ಯೆ ಬರುತ್ತಿದೆ. ಹಾಗಾಗಿ ಮಕ್ಕಳಿಗೆ ನೆನೆಸಿದ ವಾಲ್ನಟ್ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀಡಿ. ನೆನೆಸಿದ ವಾಲ್ನಟ್ ಸೇವನೆಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿರುತ್ತದೆ.
ನಿಮ್ಮ ಮಕ್ಕಳ ತೂಕ ಸರಿಯಾಗಿ ಇರಬೇಕು. ಹೆಚ್ಚು ಆಗಬಾರದೂ, ಕಡಿಮೆಯೂ ಆಗಬಾರದು ಅಂದ್ರೆ, ನೀವು ನಿಮ್ಮ ಮಕ್ಕಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ವಾಲ್ನಟ್ ನೀಡಬಾರದು. ಏಕೆಂದರೆ, ಇದರಲ್ಲಿ ನಾರಿನಂಶ ಇರುವುದರಿಂದ, ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಮಲ ಮೂತ್ರ ವಿಸರ್ಜನೆಗೂ ತೊಂದರೆಯಾಗುವುದಿಲ್ಲ. ಇದರಿಂದ ಮಕ್ಕಳು ಆರೋಗ್ಯವಾಗಿ, ಸರಿಯಾದ ತೂಕ ಹೊಂದಿದವರಾಗಿರುತ್ತಾರೆ.