Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಹಲವು ಕಾರಣಗಳಿದೆ. ಹಾಗಾದ್ರೆ ಹೃದಯದ ಆರೋಗ್ಯ ಹಾಳಾಗೋಕ್ಕೆ ಕಾರಣಗಳೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ನಾವು ಜೀವಿಸುವ ರೀತಿಯೇ ಇದಕ್ಕೆ ಕಾರಣ ಅಂತಾರೆ ವೈದ್ಯರು. ಹೆಚ್ಚು ಎಣ್ಣೆ ಪದಾರ್ಥಗಳ ಸೇವನೆ, ಅಗತ್ಯಕ್ಕಿಂತ ಹೆಚ್ಚು ಬೊಜ್ಜು, ಮದ್ಯಪಾನ, ಧೂಮಪಾನ ಸೇವನೆ, ಧೂಳು ಹೆಚ್ಚಿರುವ ಪ್ರದೇಶದಲ್ಲಿ ವಾಸ, ಗುಟ್ಕಾ,ತಂಬಾಕು ಸೇವನೆ ಹೀಗೆ ಹಲವು ಅಭ್ಯಾಸಗಳೇ ಹೃದಯಾಘಾತ ಬರಲು ಕಾರಣ ಅಂತಾರೆ ವೈದ್ಯರು.
ಇನ್ನು ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ನೀವು ನೋಡಿಕೊಳ್ಳಲೇಬೇಕು. ಇಲ್ಲವಾಗಿದ್ದಲ್ಲಿ ಭವಿಷ್ಯದಲ್ಲಿ ನಿಮಗೆ ಹೃದಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿದ್ದಾಗ, ಆರೋಗ್ಯಕರ ಆಹಾರ ಸೇವನೆ, ಯೋಗ, ವ್ಯಾಯಾಮ, ನಡಿಗೆ, ಹೆಚ್ಚು ನೀರು ಕುಡಿಯೋದು, ಹೆಚ್ಚು ಎಣ್ಣೆ ಪದಾರ್ಥ ತಿನ್ನದೇ ಇರೋದು ಹೀಗೆ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು ಅತ್ಯಗತ್ಯ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




