Tuesday, December 24, 2024

Latest Posts

Health Tips: ಬೇಸಿಗೆ ತಾಪದಿಂದ ದೇಹವನ್ನ ಕಾಪಾಡಿಕೊಳ್ಳುವುದು ಹೇಗೆ?

- Advertisement -

Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರ ಅವರು ಬೇಸಿಗೆಯ ತಾಪದಿಂದ ದೇಹವನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ವಿವರಣೆ ನೀಡಿದ್ದಾರೆ.

ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಜ್ವರ, ಉರಿಮೂತ್ರ, ಮಲಬದ್ಧತೆ, ಕೈ ಕಾಲು ಬಾವು ಬರುವುದು, ಇತ್ಯಾದಿ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಗಾಲದಲ್ಲಿ ನಮ್ಮ ದೇಹವನ್ನು ತಂಪಾಗಿ ಇರಿಸಿಕೊಂಡಷ್ಟು, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಇದಕ್ಕೆ ಪರಿಹಾರ ಅಂದ್ರೆ, ನಾವು ಕಾಲಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಬೇಕು. ಮಳೆಗಾಲ, ಚಳಿಗಾಲದಲ್ಲಿ ಉಷ್ಣ ಪದಾರ್ಥವನ್ನು ಸೇವಿಸಬೇಕಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ದೇಹ ಹೆಚ್ಚು ತಂಪಾಗಿ, ರೋಗ ನಿರೋಧಕ ಶಕ್ತಿ ಕಳೆದುಕೊಂಡಿರುತ್ತದೆ. ಹಾಗಾಗಿ ಉಷ್ಣ ಪದಾರ್ಥಗಳಲ್ಲಿ ಕೆಲವು ಆರೋಗ್ಯಕರ ಪದಾರ್ಥಗಳ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಂದರೆ ಸೂಪ್, ಪೆಪ್ಪರ್ ರಸಂನಂಥ ಬಿಸಿ ಬಿಸಿ ಪದಾರ್ಥಗಳು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

ಅದೇ ಬೇಸಿಗೆ ಗಾಲದಲ್ಲೂ ಸೂಪ್ ತಿನ್ನುತ್ತೇವೆ ಎಂದರೆ, ದೇಹದ ಉಷ್ಣತೆ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಬೇಸಿಗೆಯಲ್ಲಿ ಮಜ್ಜಿಗೆ, ಮೊಸರು, ಎಳನೀರು, ತಂಪಾದ ಹಣ್ಣು- ತರಕಾರಿ, ಮೊಳಕೆ ಕಾಳು, ಸೊಪ್ಪು, ಇಂಥ ಆಹಾರಗಳನ್ನು ತಿಂದು ದೇಹವನ್ನು ತಂಪು ಮಾಡಿಕೊಳ್ಳಬೇಕು. ಹೆಚ್ಚೆಚ್ಚು ಶುದ್ಧವಾದ ನೀರು ಕುಡಿಯಬೇಕು. ಈ ಬಗ್ಗೆ ಇನ್ನನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ವೀಡಿಯೋ ನೋಡಿ.

- Advertisement -

Latest Posts

Don't Miss