Saturday, September 21, 2024

Latest Posts

Health Tips: ನೀರು ಸರಿಯಾಗಿ ಕುಡಿಯದಿದ್ದಲ್ಲಿ, ಈ ಸಮಸ್ಯೆ ಕಂಟುಬರುತ್ತದೆ ಎಚ್ಚರ

- Advertisement -

Health Tips: ನಾವು ಈಗಾಗಲೇ ನಿಮಗೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ, ಮತ್ತು ನೀರು ಕುಡಿಯದೇ ಇದ್ದಾಗ ಏನೇನು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ನಾವು ನೀರು ಸರಿಯಾಗಿ ಕುಡಿಯದಿದ್ದಲ್ಲಿ, ಪುರುಷರಿಗೆ ಆಗುವ ಸಮಸ್ಯೆ ಏನು ಅನ್ನೋ ಬಗ್ಗೆ ವಿವರಿಸಲಿದ್ದೇವೆ. ಪಾರಂಪರಿಕ ವೈದ್ಯೆಯಾದ ಪವಿತ್ರಾ ಅವರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ.

ಪುರುಷರಲ್ಲಿ ಕಂಡುಬರುವ ಅಸ್ಟೀಲ ಊತ ಎಂಬ ಆರೋಗ್ಯ ಸಮಸ್ಯೆ ಉದ್ಭವಿಸುವುದೇ, ಕಡಿಮೆ ನೀರಿನ ಸೇವನೆಯಿಂದ. ಹಾಗಾಗಿ ದಿನಕ್ಕೆ ರಡು ಲೀಟರ್ ನೀರಾದರೂ ಕುಡಿಯಬೇಕು ಅಂತಾರೆ ವೈದ್ಯರು. ಓರ್ವ ಮನುಷ್ಯ ದಿನಕ್ಕೆ 3 ಲೀಟರ್ ತನಕ ನೀರು ಕುಡಿಯಬಹುದು. ಅದಕ್ಕಿಂತ ಹೆಚ್ಚು ನೀರು ಕುಡಿಯುವುದು ಅಪಾಯಕರ.

ಆದರೆ ನೀವು ಬಾಯಾರಿಕೆಯಾದಾಗಲೂ ಸರಿಯಾಗಿ ನೀರು ಕುಡಿಯದೇ, ನಿರ್ಲಕ್ಷ ಮಾಡಿದರೆ, ಅದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ 50 ವರ್ಷ ದಾಟಿದ ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಚಿಕ್ಕ ವಯಸ್ಸಿನ ಪುರುಷರಿಗೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದಕ್ಕೆಲ್ಲ ಕಾರಣ ಅಂದ್ರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ನಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗುವುದು. ಇಂಥ ಸಂದರ್ಭದಲ್ಲಿ ಈ ಅಸ್ಟೀಲ ಊತ ಅನ್ನೋದು ಕಂಡು ಬರುತ್ತದೆ. ಇನ್ನು ಈ ಸಮಸ್ಯೆ ಉದ್ಭವಿಸಲು ಮೂಲ ಕಾರಣ ಅಂದ್ರೆ, ನಮ್ಮ ಜೀವನ ಶೈಲಿ ಅಂತಾರೆ ವೈದ್ಯರು.

ನಾವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಬೇಕು. ಇಲ್ಲವಾದಲ್ಲಿ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಬಳಿಕ ನಮಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆ ಬರಬಾರದೆಂದರೆ, ಇರುವುದು ಒಂದೇ ಪರಿಹಾರವೆಂದರೆ, ಸರಿಯಾಗಿ ನೀರು ಕುಡಿಯುವುದು. ಈ ಸಮಸ್ಯೆಯ ಬಗ್ಗೆ ವಿವರಣೆ ಮತ್ತು ಸಮಸ್ಯೆಗೆ ಸರಿಯಾದ ಪರಿಹಾರವೇನೆಂದು ವೈದ್ಯರೇ ವಿವರಿಸಿದ್ದಾರೆ ನೋಡಿ.

- Advertisement -

Latest Posts

Don't Miss