Friday, August 29, 2025

Latest Posts

Health Tips: 1-9 ನಿಯಮವನ್ನು ಅನುಸರಿಸಿದರೆ ನೀವು ಆರೋಗ್ಯವಾಗಿರುತ್ತೀರಿ.

- Advertisement -

Health Tips: ನಾವಿಂದು ನಿಮಗೆ 9 ಹೆಲ್ತ್ ಟಿಪ್ಸ್ ನೀಡಲಿದ್ದೇವೆ. ಅಂದ್ರೆ ನೀವು 1-9 ಅನ್ನೋ ನಿಯಮವನ್ನು ಅನುಸರಿಸಿದರೆ, ಆರೋಗ್ಯವಾಗಿ ಇರಲಿದ್ದೀರಿ. ಆದರೆ ಈ ನಿಯಮ ಅನುಸರಿಸುವಾಗ, ಎಚ್ಚರಿಕೆಯಿಂದಿರಬೇಕು.

1ನೇ ದಿನವೇ ನಾನು ಈ ಎಲ್ಲಾ ನಿಯಮ ಅನುಸರಿಸುತ್ತೀನಿ ಅಂದ್ರೆ ನಿಮ್ಮ ಆರೋಗ್ಯ ಹಾಳಾಗಬಹುದು. ಹಾಗಾಗಿ ಚುರು ಚುರು ನಿಯಮ ಅನುಸರಿಸಿ, ಅಭ್ಯಾಸವಾದ ಬಳಿಕ ಪೂರ್ತಿಯಾಗಿ 1-9 ನಿಯಮ ಅನುಸರಿಸಬಹುದು. ಹಾಗಾದ್ರೆ ಈ ನಿಯಮವೇನು ತಿಳಿಯೋಣ ಬನ್ನಿ..

9 ಅಂದ್ರೆ 9 ಸಾವಿರ ಹೆಜ್ಜೆ ನಡೆಯಬೇಕು. ಪ್ರತಿದಿನ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿ. ದಿನಕ್ಕೆ 9 ಸಾವಿರ ಹೆಜ್ಜೆ ನಡೆಯಬೇಕು. ಆದರೆ ನೀವು ಪ್ರತಿದಿನ ಸ್ವಲ್ಪ ಸ್ವಲ್ಪ ನಡೆದು, ಬಳಿಕ ಪ್ರತಿದಿನ 9 ಸಾವಿರ ಹೆಜ್ಜೆ ನಡೆಯಬಹುದು.

8 ಅಂದ್ರೆ ಪ್ರತಿದಿನ 8 ಗ್ಲಾಸ್ ನೀರು ಕುಡಿಯಬೇಕು. ಹಾಗಂತ 1 ಸಲ 8 ಗ್ಲಾಸ್ ನೀರು ಕುಡಿಯಬೇಡಿ. ಪ್ರತಿದಿನ ನಿಮಗೆ ಜೀರ್ಣಿಸಿಕ“ಳ್ಳಲು ಸಾಧ್ಯವಾಗುವಷ್ಟು ಕುಡಿಯಿರಿ. ಬಳಿಕ 8 ಗ್ಲಾಸ್ ಕುಡಿಯಲು ಸಾಧ್ಯವಾದರೆ 8 ಗ್ಲಾಸ್ ನೀರು ಕುಡಿಯಿರಿ. ಇದರಿಂದ ನಿಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಸೌಂದರ್ಯವೂ ಹೆಚ್ಚುತ್ತದೆ.

7 ಅಂದ್ರೆ 7 ಗಂಟೆ ಚೆನ್ನಾಗಿ ನಿದ್ದೆ ಮಾಡಿ. ನಿದ್ದೆ ಮಾಡುವುದರಿಂದ ನಾವು ಫ್ರೆಶ್ ಆಗುತ್ತೇವೆ. 7 ಗಂಟೆ ಸತತವಾಗಿ ನಿದ್ದೆ ಮಾಡಿದರೆ, ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

6 ಅಂದ್ರೆ ಪ್ರತಿದಿನ 6 ನಿಮಿಷ ಧ್ಯಾನ ಮಾಡಿ. ಇದರಿಂದ ಏಕಾಗೃತೆ ಹೆಚ್ಚುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ.

5 ಅಂದ್ರೆ 5 ರೀತಿಯ ತರಕಾರಿ ಮತ್ತು ಹಣ್ಣು ಪ್ರತಿದಿನ ಸೇವಿಸಿ. ಹಣ್ಣು ತರಕಾರಿಗಳ ಸೇವನೆಯಿಂದ ರೋಗ ರುಜಿನಗಳು ದೂರವಿರುತ್ತದೆ. ಅದರಲ್ಲೂ ಹಸಿ ತರಕಾರಿ ಸೇವನೆಯಿಂದ ನಾವು ಯಂಗ್ ಆಗಿ ಕಾಣುತ್ತೇವೆ.

4 ಅಂದ್ರೆ 4 ಸ್ಟ್ರೆಚ್ ವರ್ಕೌಟ್. ಅಂದ್ರೆ ನೀವು ಹೆಚ್ಚು ಸಮಯ ಕುಳಿತು ಕೆಲಸ ಮಾಡುತ್ತೀರಿ ಎಂದಲ್ಲಿ, 4 ಬಾರಿ ಬ್ರೇಕ್ ತೆಗೆದುಕ“ಂಡು, ಮೈ ಕೈ ಸ್ಟ್ರೆಚ್ ಮಾಡಿ. ಇದು ವ್ಯಾಯಾಮದ ರೀತಿ ಕೆಲಸ ಮಾಡುತ್ತದೆ.

3 ಅಂದ್ರೆ ಪ್ರತಿದಿನ 3 ಹೆಲ್ದಿ ಮೀಲ್ಸ್ ಸೇವಿಸಿ. ಅಂದ್ರೆ ತಿಂಡಿ, ಊಟ, ರಾತ್ರಿ ಫಲಹಾರ ಆರೋಗ್ಯಕರವಾಗಿರಲಿ ಮತ್ತು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.

2 ಅಂದ್ರೆ ಮಲಗುವ 2 ಗಂಟೆ ಮುಂಚೆ ನೋ ಸ್ಕ್ರೀನ್ ಟೈಮ್. ಬೇಕಾದ್ರೆ ಪುಸ್ತಕ ಓದಿ. ಪ್ರೀತಿಪಾತ್ರರ ಜತೆ ಮಾತನಾಡಿ. ಮಕ್ಕಳ ಜತೆ ಆಟವಾಡಿ. ಏನಾದರೂ ಮಾಡಿ. ಆದರೆ Mobile, TV, Computer, Laptop ಬಳಕೆ ಮಾಡಬೇಡಿ.

1 ಅಂದ್ರೆ ಯೋಗಾ, ಜಿಮ್‌, ಡಾನ್ಸ್ ಇದರಲ್ಲಿ ಯಾವುದಾದರೂ 1ನ್ನು ಆರಿಸಿ, ಪ್ರತಿದಿನ ನಿಮ್ಮ ಜೀವನದಲ್ಲಿ ಅಳವಡಿಸಿಕ“ಳ್ಳಿ.

- Advertisement -

Latest Posts

Don't Miss