Friday, August 29, 2025

Latest Posts

Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ ಆಹಾರದಲ್ಲಿ ಇದನ್ನು ಸೇರಿಸಿ..

- Advertisement -

Health Tips: ಯಾರಿಗೆ ತಾನೇ, ತಾವು ಯಂಗ್ ಆಗಿ, ಚಂದಾಗಾಣಿಸಬೇಕು ಅಂತಾ ಅನ್ನಿಸೋದಿಲ್ಲ ಹೇಳಿ..? ಆದರೆ ನೀವು ಚೆಂದಗಾಣಿಸಬೇಕು, ಯಂಗ್ ಆಗಿರಬೇಕು ಅಂತಾ ಕ್ರೀಮ್ ಹಚ್ಚಿದ್ರೆ ಸಾಕಾಗಲ್ಲ. ಬದಲಾಗಿ ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಹಾಗಾಗಿ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣಿನ ಸೇವನೆಯಿಂದ ನಿಮ್ಮ ಸ್ಕಿನ್ ಸುಂದರವಾಗುತ್ತದೆ. ನಿಮ್ಮ ತ್ವಚೆ ಆರೋಗ್ಯಕರವಾಗುತ್ತದೆ. ಸ್ಕಿನ್ ಗ್ಲೋ ಆಗುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಬೆಣ್ಣೆ ಹಣ್ಣಿನ ಸೇವನೆ ಮಾಡಬೇಕು ಅಂತಾ ಹೇಳುತ್ತಾರೆ. ಯಾಕಂದ್ರೆ ಅವರ ಸ್ಕಿನ್ ಚೆನ್ನಾಗಿರುವುದಲ್ಲದೇ, ಅವರಿಗೆ ಜನಿಸುವ ಮಗುವಿನ ಸ್ಕಿನ್ ಕೂಡ ಆರೋಗ್ಯವಾಗಿ, ಸಾಫ್ಟ್ ಆಗಿ, ಗ್ಲೋ ಆಗಿರುತ್ತದೆ.

ವಾಲ್ನಟ್: ವಾಲ್ನಟ್ ಸೇವನೆಯಿಂದ ಬರೀ ಬುದ್ಧಿ ಬೆಳವಣಿ ಆಗುವುದು ಮಾತ್ರವಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಉತ್ತಮ ಅಭಿವೃದ್ಧಿಯಾಗುತ್ತದೆ. ಪಿಸಿಓಡಿ ಸಮಸ್ಯೆ ಇದ್ದವರು ಇದನ್ನು ನೆನೆಸಿ, ತಿಂದರೆ, ಅವರ ಆರೋಗ್ಯ ಕೂಡ ಸರಿಯಾಗುತ್ತದೆ. ಅದರ ಜತೆಗೆ ಸ್ಕಿನ್ ಕೂಡಾ ಗ್ಲೋ ಆಗುತ್ತದೆ.

ಫ್ಲ್ಯಾಕ್ಸ್ ಸೀಡ್ಸ್: ಇನ್ನು ಫ್ಲಾಕ್ಸ್ ಸೀಡ್ಸ್ ಅಂದ್ರೆ ಅಗಸಿಬೀಜ. ನೀವು ಇದನ್ನು ನಿಮ್ಮ ಆಹಾರದಲ್ಲಿ ಹೇಗೆ ಬಳಸಬೇಕು ಅಂದ್ರೆ, ಇದರ ಪುಡಿ ಮಾಡಿ, ಅನ್ನದ ಜತೆ, ಚಪಾತಿ ಜತೆ ಸೇರಿಸಿ ಸೇವಿಸಬಹುದು. ಇದರ ಸೇವನೆಯಿಂದ ಕೂದಲಿನ ಆರೋಗ್ಯ ಅದ್ಭುತವಾಗುವುದಲ್ಲದೇ, ಸ್ಕಿನ್ ಕೂಡಾ ಚೆನ್ನಾಗಿರುತ್ತದೆ.

ಹಾಗಾಗಿಯೇ ಉತ್ತರಕರ್ನಾಟಕದ ಅದೆಷ್ಟೋ ಹೆಣ್ಣು ಮಕ್ಕಳ ಸ್ಕಿನ್ ಮತ್ತು ಕೂದಲು ಚೆಂದಗಾಣಿಸುತ್ತದೆ. ಏಕೆಂದರೆ, ಅಲ್ಲಿನ ಜನ ಊಟದಲ್ಲಿ ಅಗಸಿ ಚಟ್ನಿಪುಡಿ ಬಳಸುತ್ತಾರೆ.

- Advertisement -

Latest Posts

Don't Miss