Life lesson: ಅನುಮಾನ ಅಪನಂಬಿಕೆ ಇದ್ರೆ ಆ ಸಂಬಂಧ ಬೇಕಾ?

Life lesson: ಮದುವೆ ಸಂಬಂಧ ಮುರಿದು ಬೀಳಬಾರದು ಅಂದ್ರೆ, ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋ ಬಗ್ಗೆ ಮನೋವೈದ್ಯೆಯಾದ ಡಾ.ರೂಪಾ ಅವರು ವಿವರಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಅವರ ಬಳಿ ಕೌನ್ಸಿಲಿಂಗ್‌ಗೆ ಹೋದಾಗ, ಅವರು ನೀಡುವ ಪ್ರಪ್ರಥಮ ಸಲಹೆ ಅಂದ್ರೆ, ಪತಿ- ಪತ್ನಿ ಇಬ್ಬರೂ ಕುಳಿತು, ನಿಮ್ಮ ನಿಮ್ಮ ನಿರೀಕ್ಷೆಗಳನ್ನು ಪಟ್ಟಿ ಮಾಡಿಕ“ಳ್ಳಿ. ಬಳಿಕ ಅದನ್ನು ಇಬ್ಬರೂ ಶೇರ್ ಮಾಡಿ. ಇದರಿಂದ ಇಬ್ಬರ ನೀರಿಕ್ಷೆ ಅರ್ಥವಾಗುತ್ತದೆ. ಮತ್ತು ಈಗಲೇ ಆ ನಿರೀಕ್ಷೆಗೆ ಓಕೆ ಹೇಳಬೇಕು ಅನ್ನೋ ಸ್ವಭಾವವನ್ನು ಬಿಡುವಂತೆ ಸೂಚಿಸುತ್ತೇನೆ ಅಂತಾರೆ ವೈದ್ಯರು.

ಏಕೆಂದರೆ, ಮದುವೆ ಆದ ತಕ್ಷಣವೇ ನಿಮ್ಮ ನಿರೀಕ್ಷೆಗಳೆಲ್ಲ ಈಡೇರಬೇಕು. ಅಡ್ಜಸ್ಟ್ ಆಗಲೇಬೇಕು ಅನ್ನೋ ಭಾವನೆ ಉತ್ತಮವಲ್ಲ. ಇದರಿಂದಲೇ ಜಗಳವಾಗೋದು. ಹಾಗಾಗಿ ಸಂಸಾರದಲ್ಲಿ ತಾಳ್ಮೆ ಅನ್ನೋದು ತುಂಬಾ ಮುಖ್ಯ.

ಇನ್ನು ಮದುವೆಗೂ ಮುನ್ನ ನಿಮ್ಮ ಜೀವನ ಸಂಗಾತಿಯಲ್ಲಿ ಅನುಮಾಾನಾಸ್ಪದವಾದ ನಡುವಳಿಕೆ ಕಂಡುಬಂದಲ್ಲಿ, ಅಂಥವರಿಂದ ದೂರವಿರುವುದು ಉತ್ತಮ. ಇಲ್ಲವಾದಲ್ಲಿ, ಕ್ರೈಮ್ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿಯೇ ಮದುವೆಯಾದ ಬಳಿಕ, ಹಲ್ಲೆ, ದೌರ್ಜನ್ಯ, ಮರ್ಡರ್‌ನಂಥ ಘಟನೆ ಸಂಭವಿಸುತ್ತಿರುವುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author