Health Tips: ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ನಮ್ಮ ದೇಹದ ಭಾಗಗಳು ಸರಿಯಾಗಿ ಇರುವುದು ತುಂಬಾ ಮುಖ್ಯ. ಅದರಂತೆ, ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಲು ಕಾರಣವೇನು..? ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
ನಾವು ಸೇವಿಸಿದ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶ ಇಲ್ಲವಾದಲ್ಲಿ, ನಮ್ಮ ದೇಹದಲ್ಲಿ ರಕ್ತಹೀನತೆ ಕೊರತೆ ಕಾಣುತ್ತದೆ. ಹಾಗಾಗಿ ಉತ್ತಮ ಪೌಷ್ಟಿಕಾಂಶವಿರುವ, ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇದರೊಂದಿಗೆ ಹೆಚ್ಚು ಉಪವಾಸ ಮಾಡದೇ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಕೂಡ ಅಷ್ಟೇ ಮುಖ್ಯ. ಈ ರೀತಿ ಆಹಾರ ತೆಗೆದುಕೊಳ್ಳುವ ಸಮಯ ಏರುಪೇರಾದಾಗಲೇ, ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ.
ಇಷ್ಟೇ ಅಲ್ಲದೇ, ನಾವು ಹೆಚ್ಚು ನೀರು ಕುಡಿಯಬೇಕು. ವೈದ್ಯರು ಹೇಳುವ ಪ್ರಕಾರ, 3 ಲೀಟರ್ ನೀರನ್ನಾದರೂ ನಾವು ಕುಡಿಯಬೇಕು. ಆದರೆ ನಿಮಗೆ ದಿನಕ್ಕೆ ಎಷ್ಟು ನೀರು ಜೀರ್ಣಿಸಿಕೊಳ್ಳುವ ಶಕ್ತಿ ಇದೆಯೋ, ಅಷ್ಟು ನೀರನ್ನು ನೀವು ಕುಡಿಯಬೇಕು. ನೀರು ಕುಡಿಯುವುದು ಕಡಿಮೆಯಾದಂತೆ, ನಿಮ್ಮ ದೇಹದಲ್ಲಿ ರಕ್ತಹೀನತೆ ಸಮಸ್ಯೆ ಉಂಟಾಗುವುದಲ್ಲದೇ, ದೇಹದಲ್ಲಿನ ಶಕ್ತಿ ಕುಂದಿಹೋಗುತ್ತದೆ.
ಇನ್ನು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವುದು, ಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವುದೆಲ್ಲ ಮಾಡಿದಾಗ, ಅದಕ್ಕೆ ತಕ್ಕ ಹಾಗೆ ಆಹಾರ, ನೀರಿನ ಸೇವನೆ ಮಾಡಬೇಕು. ಇಲ್ಲದಿದ್ದರೂ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. ಇನ್ನು ನಿಮ್ಮ ದೇಹದ ತೂಕ ಹೆಚ್ಚಾಗಿದ್ದರೂ ಕೂಡ, ನಿಮ್ಮ ದೇಹದಲ್ಲಿ ರಕ್ತಹೀನತೆ ಸಮಸ್ಯೆ ಉಂಟಾಗಿದ್ದರೆ, ರಕ್ತ ಶುದ್ಧವಾಗಿಲ್ಲ ಎಂದರ್ಥ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.