Health Tips: ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಆದ್ರೆ ತುಪ್ಪದ ಬಳಕೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಅನ್ನತ್ತೆ ಆಯುರ್ವೇದ. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ ಹಾಲಿನಿಂದ ಮಾಡಿದ ತುಪ್ಪಕ್ಕಿಂತ, ದೇಶಿಯ ತಳಿಯ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಸೇವಿಸಿದ್ದಲ್ಲಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.
ಎಣ್ಣೆ ಉಪಯೋಗಕ್ಕಿಂತ, ತುಪ್ಪದ ಉಪಯೋಗ ಒಳ್ಳೆಯದು. ಅಡುಗೆ ಮಾಡುವಾಗ ತುಪ್ಪ ಬಳಸಿದ್ರೆ, ಆರೋಗ್ಯ ಉತ್ತಮವಾಗಿರುತ್ತದೆ. ಅಂಥ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ.
ನೆನಪಿನ ಶಕ್ತಿ, ಚುರುಕುತನವಿಲ್ಲದವರು ಹಾಲಿನೊಂದಿಗೆ ಸ್ವಲ್ಪ ತುಪ್ಪ ಬೆರೆಸಿ ಕುಡಿಯಬಹುದು. ಬಹುತೇಕ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಂಥವರು ಇದನ್ನ ಬಳಸಬಹುದು.
ತುಪ್ಪ ಮಾಯಿಶ್ಚರಾಯ್ಸರ್ ರೀತಿ ಕೆಲಸ ಮಾಡುವುದರಿಂದ, ಒಣತ್ವಚೆಯುಳ್ಳವರು ಕೆಲ ಹನಿ ತುಪ್ಪವನ್ನು ತ್ವಚೆಗೆ ಹಚ್ಚಿಕೊಳ್ಳಬಹುದು.
ತುಪ್ಪ ತಿಂದ ಮೇಲೆ ಅಥವಾ ತುಪ್ಪದಿಂದ ಮಾಡಿದ ಯಾವುದೇ ಪದಾರ್ಥ ಸೇವಿಸಿದ ಮೇಲೆ ತಣ್ಣಿರು ಕುಡಿಯುವಂತಿಲ್ಲ. ಇದರಿಂದ ಕೆಮ್ಮು , ಎದೆ ನೋವು ಇತ್ಯಾದಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತುಪ್ಪ ಸೇವನೆಯ ನಂತರ ಬಿಸಿನೀರಿ ಸೇವನೆ ಅತ್ಯಗತ್ಯ.
ತುಪ್ಪ ಮತ್ತು ಮೊಸರು ಬೆರೆಸಿ ತಿನ್ನುವಂತಿಲ್ಲ. ಹೀಗೆ ಮಾಡಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಉದಾಹರಣೆಗೆ ರೊಟ್ಟಿ, ಅನ್ನ ಅಥವಾ ಚಪಾತಿಯೊಂದಿಗೆ ತುಪ್ಪ ಬೆರೆಸಿದ್ದಲ್ಲಿ ಮೊಸರು ಸೇವಿಸಬಾರದು. ಮೊಸರಿನಿಂದ ಮಾಡಿದ ಪದಾರ್ಥಕ್ಕೆ ತುಪ್ಪದ ಒಗ್ಗರಣೆ ಕೊಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೆಚ್ಚಿಗೆ ಕುಡಿದರೆ ಅಮೃತವೂ ವಿಷವೇ ಎಂಬಂತೆ, ತುಪ್ಪದ ಸೇವನೆ ಅತಿಯಾದರೆ ದೇಹಕ್ಕೆ ಹಾನಿಯುಂಟಾಗುತ್ತದೆ. ಅದರಲ್ಲೂ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದಲ್ಲಿ, ತುಪ್ಪ ಎಣ್ಣೆಯ ಸೇವನೆಯನ್ನು ಕಡಿಮೆ ಮಾಡಬೇಕಂತೆ. ಹಾಗಾಗಿ ತುಪ್ಪ ತಿನ್ನುವ ಮುನ್ನ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿದೆಯಾ ಇಲ್ಲವಾ ಅಂತಾ ಒಮ್ಮೆ ಪರೀಕ್ಷಿಸಿಕೊಳ್ಳಿ.