Tuesday, September 23, 2025

Latest Posts

Health Tips: ಬೆಂಗಳೂರಲ್ಲಿ 24 ಗಂಟೆ ಜೀವನ 5-6 ಸಿಗರೇಟ್ ಸೇದಿದ್ದಕ್ಕೆ ಸಮ : Dr Bhavya Podcast

- Advertisement -

Health Tips: ಬೆಂಗಳೂರಿನಲ್ಲಿ ವಾಹನ ಓಡಾಟದ ಕಾರಣ, ಕಾರ್ಖಾನೆಗಳ ಹೊಗೆಗಳಿಂದ ವಾತಾವರಣ ಕಲ್ಮಶವಾಗಿರುವ ಕಾರಣ, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.  ಹಾಗಾಗಿ ಡಾ.ಭವ್ಯಾ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬೆಂಗಳೂರು ಕಲುಶಿತ ವಾತಾವರಣದ ಪ್ರಭಾವ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದ ಯಾವ ಭಾಗ ಕಾರ್ಯನಿರ್ವಹಿಸದಿದ್ದರೂ, ನಾವು ಸರಿಯಾಗಿ ಉಸಿರಾಡುವ ಸ್ಥಿತಿಯಲ್ಲಿದ್ದರೆ ಸಾಕು, ನಾವು ಬದುಕಬಹದು. ಹಾಗಾಗಿ ಶ್ವಾಸಕೋಶ ಅನ್ನೋದು ಮನುಷ್ಯನ ಬದುಕಿಗೆ ಅಷ್ಟು ಮುಖ್ಯ ಅಂತಾರೆ ವೈದ್ಯರು.

ಅಲ್ಲದೇ ನಮ್ಮ ಬೆಂಗಳೂರು ವಾತಾವರಣ ಅದೆಷ್ಟರ ಮಟ್ಟಿಗೆ ಹಾಳಾಗಿದೆ ಎಂದರೆ, ಬೆಂಗಳೂರಿನಲ್ಲಿ ನೀವು 24 ಗಂಟೆ ಓಡಾಡಿದರೆ, ಅದು 6ರಿಂದ 7 ಸಿಗರೇಟ್ ಸೇದಿದರೆ ಆಗುವಂಥ ಪರಿಣಾಮ ಬೀರುತ್ತದೆ. ಆ ರೀತಿ ಬೆಂಗಳೂರು ವಾತಾರವಣ ಹಾಳಾಗಿದೆ ಅಂತಾರೆ ವೈದ್ಯರು.

ಅಲ್ಲದೇ ನಮಗಿರುವ ಕೆಲಸದ ಟೆನ್ಶನ್ ಕೂಡ ನಮ್ಮ ಉಸಿರಾಟದ ಸಮಸ್ಯೆಗೆ ಕಾರಣವಾಗಿರುತ್ತದೆ. ಇದರಿಂದಲೇ ಬಿಪಿ, ಶುಗರ್, ಅಸ್ತಮಾದಂಥ ಸಮಸ್ಯೆ ಉದ್ಭವಿಸುತ್ತಿದೆ. ಚಿಕ್ಕ ಮಕ್ಕಳಲ್ಲೂ ಅಲರ್ಜಿ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ನಾವು ಆದಷ್ಟು ಬೆಂಗಳೂರಿನಿಂದ ಆಚೆ ಹೋಗಿ, ಉತ್ತಮವಾದ ವಾತಾವರಣದಲ್ಲಿ ಸಮಯ ಕಳೆಯುವುದು ಉತ್ತಮ ವಿಷಯ ಅಂತಾರೆ ವೈದ್ಯರು.

ವೈದ್ಯರು ಹೇಳುವ ಪ್ರಕಾರ ನಾವು ಮುಂಚೆ ಎಲ್ಲ ಎಷ್ಟೇ ಧೂಳು, ಗಲೀಜಿನಲ್ಲಿ ಇದ್ದರೂ, ನಮಗೆ ಅದರ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ನಮ್ಮಲ್ಲಿತ್ತು. ಆದರೆ ಇಂದಿನ ಕಾಲದಲ್ಲಿ ಅಪ್ಪ ಅಮ್ಮ ಹಲವು ಔಷಧ, ಪ್ರಾಡಕ್ಟ್ ಮುಂತಾದವುಗಳನ್ನು ಬಳಸಿದರೂ ಕೂಡ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತ ಹೋಗುತ್ತಿದೆ. ಹಾಗಾಗಿ ರೋಗ ರುಜಿನಗಳ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

ಶ್ವಾಸಕೋಸದ ಸಮಸ್ಯೆ, ಅಲರ್ಜಿ, ಅಸ್ತಮಾ ಸೇರಿದಂತೆ ಯಾವುದೇ ಸಮಸ್ಯೆಗಳ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ. ಡಾ ಭವ್ಯ ಶಿವಲಿಂಗಯ್ಯ ಅವರ ಬಳಿ ಕೇಳಬಹುದು.. SJ THE LUNG CARE – 7975242178.

- Advertisement -

Latest Posts

Don't Miss