Health Tips: ಬೇಸಿಗೆಗಾಲ ಶುರುವಾಯ್ತು ಈ ಸಮಯದಲ್ಲಿ ನಾವು ಎಷ್ಟು ನೀರು ಕುಡಿದರೂ ಸಕಾಗೋದಿಲ್ಲಾ. ಎಷ್ಟು ಆರೋಗ್ಯದ ಬಗ್ಗೆ, ಚರ್ಮದ ಬಗ್ಗೆ ಕಾಳಜಿ ತೆಗೆದುಕೊಡರೂ ಕಡಿಮೆಯೇ. ಹಾಗಾಗಿ ನಾವು ಆದಷ್ಟು ಬಿಸಿಲಿಗೆ ಹೋಗೋದನ್ನೇ ಅವಾಯ್ಡ್ ಮಾಡಬೇಕು. ಇನ್ನು ಬೇಸಿಗೆ ಗಾಲದಲ್ಲಿ ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆ ಬರಬಹುದು ಅನ್ನೋ ಬಗ್ಗೆ ಡಾ.ಪವನ್ ವಿವರಿಸಿದ್ದಾರೆ ನೋಡಿ.
ಬೇಸಿಗೆ ಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ನಾವು, ಲೋಶನ್, ಮಾಯಿಶ್ಚರೈಸಿಂಗ್ ಕ್ರೀಮ್, ಸನ್‌ಸ್ಕ್ರೀನ್ ಲೋಶನ್ ಸೇರಿ, ಚರ್ಮ ಆರೋಗ್ಯವಾಗಲು ಏನೇನು ಮಾಡಬೇಕೋ, ಅದನ್ನು ಬಳಸಬೇಕು. ಅಲ್ಲದೇ, ತಲೆಗೆ ಕ್ಯಾಪ್, ಬಟ್ಟೆ ಬಳಸುವುದು, ಕೊಡೆ ಬಳಸುವುದು, ಬಿಸಿಲಿನ ಬೇಗೆಯಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರಲು ನಾವು ಪ್ರಯತ್ನಿಸಬೇಕು.
ಇನ್ನು ನೀರು, ಎಳನೀರು, ಮಜ್ಜಿಗೆ, ಜ್ಯೂಸ್, ಹಣ್ಣು, ಹೀಗೆ ತಂಪಾದ ಆಹಾರ, ಪೇಯವನ್ನು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಬೇಕು. ಆದಷ್ಟು ಮನೆಯಲ್ಲೇ ತಯಾರಿಸಿದ ಪೇಯವನ್ನೇ ಬಳಸುವುದು ಉತ್ತಮ. ಅಲ್ಲದೇ, ಮನೆಯಲ್ಲಿ ಕುದಿಸಿ, ಆರಿಸಿದ ನೀರನ್ನೇ ಬಳಸಿದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹೊರಗೆ ಸಿಗುವ ನೀರು ಶುದ್ಧವಾಗಿರುವುದಿಲ್ಲ. ಅಂಥ ನೀರಿನ ಸೇವನೆಯಿಂದಲೇ ಜೀವಕ್ಕೆ ಮಾರಕವಾಗುವ ರೋಗಗಳು ಬರುತ್ತದೆ.
ಇನ್ನು ಬೇಸಿಗೆಯಲ್ಲಿ ದೇಹ ಹೆಚ್ಚು ನಿರ್ಜಲೀಕರವಾಗುತ್ತದೆ. ಅದರಲ್ಲೂ ನಮಗೇನಾದರೂ ಆಹಾರದಲ್ಲಿ ಏರುಪೇರಾಗಿ, ಲೂಸ್ ಮೋಷನ್ ಶುರುವಾದರೆ, ಆಗ ದೇಹ ಇನ್ನೂ ನಿರ್ಜಲೀಕರವಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ ಹೆಚ್ಚು ಮಸಾಲೆಯುಕ್ತ ಪದಾರ್ಥವಾಗಿರಬಾರದು. ಆದಷ್ಟು ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.