Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಾಶ್ ರಾವ್ ಕೆಲವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಹಲವು ಮಕ್ಕಳು ಈ ಕಾರಣಕ್ಕಾಗಿಯೇ ಮೊಬೈಲ್ ದಾಸರಾಗಿದ್ದಾರೆ. ಹಾಗಾದ್ರೆ ಈ ಚಟದಿಂದ ಹೊರಬರುವುದು ಹೇಗೆ ಅಂತಾ ವೈದ್ಯರೇ ಹೇಳಿದ್ದಾರೆ ಕೇಳಿ.
ಯಾವ ರೀತಿ ಕೆಟ್ಟ ಚಟಗಳಿಗೆ ಜನ ಅಡಿಕ್ಟ್ ಆಗುತ್ತಾರೋ, ಅದೇ ರೀತಿ ಪೋರ್ನ್ ಅಡಿಕ್ಟ್. ಜನ ಒಮ್ಮೆ ಇಂಥ ವೀಡಿಯೋವನ್ನು ನೋಡಿಬಿಟ್ರೆ, ಮತ್ತೆ ಮತ್ತೆ ನೋಡುವಷ್ಟು ಅಡಿಕ್ಟ್ ಆಗಿಬಿಡ್ತಾರೆ. ಅವರ ಮನಸ್ಸು ಅವರ ಹದ್ದುಬಸ್ತಿನಲ್ಲಿ ಇರುವುದಿಲ್ಲ. ಈ ಪೋರ್ನ್ ವೀಡಿಯೋಗಳೇ ಅವರನ್ನು ಕಂಟ್ರೋಲ್ ಮಾಡುತ್ತಿರುತ್ತದೆ. ಇದನ್ನೇ ಪೋರ್ನ್ ಅಡಿಕ್ಟ್ ಅಂತಾ ಹೇಳುವುದು.
ಇನ್ನು ಕೆಲವರು ಎಷ್ಟರ ಮಟ್ಟಿಗೆ ಪೋರ್ನ್ ಅಡಿಕ್ಟ್ ಆಗಿರುತ್ತಾರೆ ಅಂದ್ರೆ, ಅದರಿಂದ ಅವರಿಗೆ ಆತಂಕ ಉಂಟಾಗಿ, ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಖಿನ್ನತೆ ಉಂಟಾಗುತ್ತದೆ, ಸೂಸೈಡ್ ಮಾಡಿಕೊಳ್ಳಬೇಕು ಎನ್ನಿಸುತ್ತದೆ ಅಂತಾ ಹೇಳ್ತಾರೆ. ಅಲ್ಲದೇ, ಕೆಲಸ ಮಾಡುವಾಗಲೂ ಅದೇ ನೆನಪಾಗಿ, ಕೆಲಸದಲ್ಲೂ ಇಂಟ್ರೆಸ್ಟ್ ಇಲ್ಲದಿರುವ ರೀತಿ ಆಗುತ್ತದೆ. ಅಲ್ಲದೇ ಎಷ್ಟೋ ಜನ ಈ ಅಡಿಕ್ಷನ್‌ನಿಂದ ಕೆಲಸವೂ ಕಳೆದುಕೊಂಡಿದ್ದಾರೆಂದು ವೈದ್ಯರು ಹೇಳುತ್ತಾರೆ.
ಈ ಎಡಿಕ್ಷನ್‌ನಿಂದ ಹಣ, ಸಂಬಂಧ, ಕೆಲಸ ಎಲ್ಲವನ್ನೂ ಕಳೆದುಕೊಂಡವರಿದ್ದಾರೆ. ಹಾಗಾದ್ರೆ ಊ ಎಡಿಕ್ಷನ್‌ನಿಂದ ಹೊರಬರುವುದು ಹೇಗೆ ಅನ್ನೋ ಬಗ್ಗೆ ಸ್ವತಃ ವೈದ್ಯರೇ ಹೇಳಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.