Health Tips: ತಾಯಿಯಾದವಳು ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ತೆಗೆದುಕೊಂಡು, ಕಾಳಜಿ ಮಾಡಿಕೊಂಡರೆ, ಆಗ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಅಲ್ಲದೇ, ಎದೆ ಹಾಲನ್ನು ಚೆನ್ನಾಗಿ ಕುಡಿಸಿದಾಗ, ಅದರ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ. ಆದರೆ ಕೆಲವು ಮಕ್ಕಳಿಗೆ ಚಿಕ್ಕಂದಿನಿಂದಲೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಅಂತಾರೆ ವೈದ್ಯರು.
ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಈ ಬಗ್ಗೆ ವಿವರಿಸಿದ್ದು, ಇತ್ತೀಚಿನ ದಿನದಲ್ಲಿ ಮಕ್ಕಳಿಗೆ ಪದೇ ಪದೇ ಆರೋಗ್ಯ ಹಾಳಾಗುತ್ತದೆ. ಯಾಕಂದ್ರೆ ಇಂದಿನ ಮಕ್ಕಳ ಆರೋಗ್ಯ ಪದ್ಧತಿ, ಜೀವನ ನಡೆಸುವ ರೀತಿ ಮೊದಲನ ಥರ ಆರೋಗ್ಯಕರವಾಗಿಲ್ಲ. ಇಂದಿನ ಮಕ್ಕಳಿಗೆ ಮನೆಯಲ್ಲಿ ಸದಾ ಜಂಕ್ ಫುಡ್ ಇರಲೇಬೇಕು. ಬೀದಿ ಬದಿ ಸಿಗುವ ತಿಂಡಿ ಹೆಚ್ಚು ಬೇಕು. ಮನೆಯೂಟ ಆ ಮಕ್ಕಳಿಗೆ ಸೇರುವುದಿಲ್ಲ. ಅದೇ ರೀತಿ ಪೋಷಕರು ಕೂಡ, ಮಕ್ಕಳು ಹೇಳಿದ್ದನ್ನ ಕೇಳುತ್ತಾರೆ. ಈ ಎಲ್ಲ ಕಾರಣಗಳಿಂದ ಮಕ್ಕಳ ಆರೋಗ್ಯ ಪದೇ ಪದೇ ಹದಗೆಡುತ್ತಿದೆ.
ಅಲ್ಲದೇ, ಹೆಚ್ಚಿನ ಮಕ್ಕಳಿಗೆ ಕೆಮ್ಮು- ಕಫದ ಸಮಸ್ಯೆ ಹೆಚ್ಚಾಗಿದೆ. ಕೆಮ್ಮು- ಕಫವಿರುವ ಸಮಯದಲ್ಲಿ ಮಾತ್ರ ಔಷಧಿ ನೀಡುವ ಕಾರಣಕ್ಕೆ, ಆ ಕಫ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಹಾಗಾಗಿ ಮಗುವಿಗೆ ವಾರಕ್ಕೆ ಎರಡು ಬಾರಿಯಾದರೂ ತುಳಸಿ ರಸವನ್ನು ಕುಡಿಯಬೇಕು. ಆಗ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದೇ ರೀತಿ ಇನ್ನೂ ಹೆಚ್ಚಿನ ಟಿಪ್ಸ್‌ಗಾಗಿ ಈ ವೀಡಿಯೋ ನೋಡಿ.