Thursday, July 10, 2025

Latest Posts

Health Tips: ಶುಗರ್ ಕಾಯಿಲೆ ಇರುವವರು ಹಣ್ಣುಗಳನ್ನ ಸೇವಿಸಬಾರದೇ.?

- Advertisement -

Health Tips: ಡಾ.ಪ್ರಕಾಶ್ ರಾವ್ ಎನ್ನುವವರು ಸಕ್ಕರೆ ಖಾಯಿಲೆ ಇರುವವರು ಯಾವ ರೀತಿ ತಮ್ಮ ಆರೋಗ್ಯವನ್ನು ನೋಡಿಕ“ಳ್ಳಬೇಕು ಅಂತಾ ಈಗಾಗಲೇ ವಿವರಿಸಿದ್ದಾರೆ. ಅದರ ಜತೆ ಇಂದು, ಶುಗರ್ ಇದ್ದವರು ಯಾವ್ಯಾವ ಹಣ್ಣು ತಿನ್ನಬಾರದು ಅಂತಲೂ ವಿವರಿಸಿದ್ದಾರೆ.

ಹಣ್ಣಿನಲ್ಲಿ ಸಿಹಿ ಅಂಶವಿರುವ ಕಾರಣಕ್ಕೆ, ಶುಗರ್ ಇರುವವರು ಹಲವು ಹಣ್ಣುಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಆದರೆ ಹಣ್ಣಿನಲ್ಲಿ ವಿಟಮಿನ್ಸ್ ಇರುತ್ತದೆ, ಮಿನರಲ್ಸ್ ಇರುತ್ತದೆ. ಹೀಗೆ ನಮಗೆ ಮಾರಕ ಖಾಯಿಲೆಗಳು ಬರದಂತೆ ತಡೆಯುವ ಶಕ್ತಿ ಹಣ್ಣುಗಳಿಗಿರುತ್ತದೆ. ಹಾಗಾಗಿ ನಾರ್ಮಲ್ ಆಗಿ ಎಲ್ಲ ಹಣ್ಣುಗಳ ಸೇವನೆ ಮಾಡಬಹುದು. ಆದರೆ ಯಾವುದೇ ಆಹಾರವನ್ನು ಅಗತ್ಯಕ್ಕಿಂತ ಹೆಚ್ಚು ಎಂದಿಗೂ ಸೇವಿಸಬಾರದು. ಏಕೆಂದರೆ ಹೆಚ್ಚಾದರೆ ಅಮೃತವೂ ವಿಷವೇ ಅನ್ನೋ ರೀತಿ, ಯಾವುದೇ ಆರೋಗ್ಯಕರ ಆಹಾರದ ಸೇವನೆ ಹೆಚ್ಚಾದರೆ, ಅದು ನಮ್ಮ ಜೀವಕ್ಕೇ ಅಪಾಯವಾಗಬಹುದು. ಹಾಗಾಗಿ ಯಾವುದೇ ಹಣ್ಣನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು ಉತ್ತಮವಲ್ಲ.

ಶುಗರ್ ಇದ್ದವರು ಚಿಕ್ಕು, ಮಾವಿನ ಹಣ್ಣು, ಬಾಳೆಹಣ್ಣು, ಈ ಹಣ್ಣುಗಳನ್ನು ಲಿಮಿಟಿನಲ್ಲಿ ಸೇವಿಸಿದರೆ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss