Health Tips: ನಮ್ಮ ದೇಹಕ್ಕೆ ವಿಟಾಮಿನ್ ಡಿ ಬೇಕು ಅಂದ್ರೆ ಬೆಳಿಗ್ಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕು. ಆದದರೆ ಇತ್ತೀಚಿನ ದಿನಗಳಲ್ಲಿ ದೊಡ್ಡವರಿಗೂ ಹೀಗೆ ತಿಳಿ ಬಿಸಿಲಿಗೆ ನಿಲ್ಲುವಷ್ಟು ಪುರುಸೊತ್ತಿಲ್ಲ. ಸಣ್ಣವರನ್ನು ಹಿಡಿದು ನಿಲ್ಲುವಷ್ಟು ಪುರುಸೊತ್ತಿಲ್ಲ. ಹಾಾಗಾಗಿ ನಾವಿಂದು ಯಾವ ಆಹಾರ ಸೇವಿಸಿದರೆ, ನಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ ಅಂತಾ ತಿಳಿಯೋಣ ಬನ್ನಿ.
ಮೀನು: ನೀವು ನಾನ್‌ವೆಜ್ ತಿನ್ನುವವರಾಗಿದ್ದರೆ, ಮೀನಿನ ಸೇವನೆ ಮಾಡಬಹುದು. ಇದರಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಕೋಳಿ ಮೊಟ್ಟೆ ತಿನ್ನುವುದರಿಂದಲೂ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಅಂಶ ಸಿಗುತ್ತದೆ.
ಹಾಲು: ಪ್ರತಿದಿನ ಹಾಲು ಕುಡಿಯುವುದರಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಹಾಲು ಕುಡಿಯುವುದರಿಂದ ಶಕ್ತಿಯೂ ಸಿಗುತ್ತದೆ. ಆದರೆ ನಿಮಗೆ ಕುಡಿದ ಹಾಲನ್ನು ಚೆನ್ನಾಗಿ ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು. ಹಾಗಿದ್ದಲ್ಲಿ ನೀವು ದಿನಕ್ಕೆ ಮೂರು ಹೊತ್ತು ಹಾಲು ಕುಡಿಯಬಹುದು.
ಸೋಯಾ: ಸೋಯಾದ ಸೇವನೆ ಮಾಡುವುದರಿಂದಲೂ ವಿಟಾಮಿನ್ ಡಿ ಸಿಗುತ್ತದೆ. ಸೋಯಾ ಕಾಳಿನಿಂದ ದೋಸೆ ಕೂಡ ತಯಾರಿಸಬಹುದು.
ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣನ್ನು ಸಂಜೆಯೊಳಗೆ ಸೇವಿಸಬೇಕು. ಕಿತ್ತಳೆ ಹಣ್ಣಿನಲ್ಲಿ ನಾರಿನಂಶವಿದ್ದು, ಇದು ದೇಹಕ್ಕೆ ವಿಟಾಮಿನ್ ಡಿ ಕೊಡುವುದಲ್ಲದೇ, ನಾವು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ. ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಚೆನ್ನಾಗಿರಿಸುತ್ತದೆ.