Health Tips: ನಿಮ್ಮ ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದ್ದರೆ ಈ ಲಕ್ಷಣಗಳು ಕಾಣಿಸುತ್ತದೆ

Health Tips: ನಮ್ಮ ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದ್ದರೆ, ಅದು ನಮ್ಮ ಜೀವನ ಶೈಲಿಯಲ್ಲಿ ಕಾಣ ಸಿಗುತ್ತದೆ. ಹಾಗಾದ್ರೆ ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದ್ದರೆ, ಏನೆಲ್ಲ ಲಕ್ಷಣಗಳು ಕಾಣಸಿಗುತ್ತದೆ ಅಂತಾ ತಿಳಿಯೋಣ ಬನ್ನಿ..

ಹೆಚ್ಚು ಸುಸ್ತು: ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದ್ದಲ್ಲಿ, ನಿಮಗೆ ಹೆಚ್ಚು ಸುಸ್ತಾಗುತ್ತದೆ. ನೀವು ರಾತ್ರಿಯಿಡೀ 8 ಗಂಟೆಗಳ ಕಾಲ ನಿದ್ರಿಸಿದರೂ, ಮತ್ತೆ ಮಲಗಬೇಕು ಎನ್ನಿಸುತ್ತದೆ. ಸಣ್ಣ ಸಣ್ಣ ಕೆಲಸ ಮಾಡಿದರೂ, ನಾಲ್ಕೈದು ಮೆಟ್ಟಿಲು ಏರಿದರೂ, ಕಾಲು ನೋವಾಗುವುದು, ಸುಸ್ತಾಗುತ್ತದೆ. ಇಂಥ ಲಕ್ಷಣ ನಿಮ್ಮಲ್ಲೂ ಇದ್ದರೆ, ನಿಮ್ಮ ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದೆ ಎಂದರ್ಥ.

ಪದೇ ಪದೇ ನೆಗಡಿ, ಜ್ವರ ಬರುವುದು: ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದ್ದಲ್ಲಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ಪದೇ ಪದೇ ಜ್ವರ, ನೆಗಡಿ, ಕೆಮ್ಮು ಬರುತ್ತದೆ. ಅಲ್ಲದೇ ದೇಹದಲ್ಲಿ ಶಕ್ತಿಯೂ ಕುಗ್ಗಿ ಹೋಗುತ್ತದೆ.

ಮೂಳೆ ಅಶಕ್ತಿಯಾಗುವುದು: ನಮ್ಮ ದೇಹದಲ್ಲಿ ವಿಟಾಮಿನ್ ಡಿ ಕಡಿಮೆ ಇದ್ದರೆ, ಮೂಳೆಗಳಲ್ಲಿ ನೋವು ಬರುತ್ತದೆ. ಯಾರಾದರೂ ಮೂಳೆಯ ಮೇಲೆ ಕೈ ಇರಿಸಿದರೂ, ನೋವಾಗುತ್ತದೆ.

ಕಾರಣವಿಲ್ಲದೇ ಕಿರಿಕಿರಿಯಾಗುವುದು: ನಿಮಗೆ ಕಾರಣವಿಲ್ಲದೇ ಕಿರಿಕಿರಿಯಾಗುತ್ತಿದೆ. ಎಲ್ಲರ ಮೇಲೂ ಕೋಪ ಬರುತ್ತಿದೆ. ವಿನಾಕಾರಣ ಕೋಪ ಮಾಡುತ್ತಿದ್ದೀರಿ ಎಂದಾದರೆ ನಿಮ್ಮ ದೇಹದಲ್ಲಿ ವಿಟಾಮಿನ್ ಡಿ ಪ್ರಮಾಣ ಕಡಿಮೆ ಇದೆ ಎಂದರ್ಥ.

About The Author