Health Tips: ನಾವು ಸೇವಿಸುವ ಕೆಲ ಆಹಾರಗಳು ನಮ್ಮ ಆರೋಗ್ಯದ ಮೇಲೆ ಸಂಪೂರ್ಣವಾಗಿ ಉತ್ತಮ ಪರಿಣಾಮ ಬೀರುವುದಿಲ್ಲ. ಇದಕ್ಕೆ ಕಾರಣ, ನಾವು ಆಹಾರದ ಕಾಂಬಿನೇಷನ್ ಅರಿತಿರುವುದಿಲ್ಲ. ಹಾಗಾಗಿ ಇಂದು ನಾವು ಯಾವ ಆಹಾರದ ಕಾಂಬಿನೇಷನ್ ಮಾಡಿ ಸೇಲಿಸಿದರೆ ಉತ್ತಮ ಅಂತಾ ತಿಳಿಯೋಣ ಬನ್ನಿ..
ಅರಿಶಿನ ಮತ್ತು ಕಾಳು ಮೆಣಸು: ನೀವು ಕಶಾಯ ಮಾಡಿ ಕುಡಿಯುತ್ತಿದ್ದರೆ, ಅಥವಾ ಗೋಲ್ಡನ್ ಮಿಲ್ಕ್ ಅಂದ್ರೆ ಅರಿಶಿನ ಹಾಲು ಮಾಡಿ ಕುಡಿಯ ಬಯಸಿದ್ದರೆ ನೀವು ಹಾಲಿಗೆ ಅಥವಾ ಕಶಾಯ ಮಾಡುವಾಗ ನೀರಿಗೆ ಅರಿಶಿನದ ಜತೆ ಕಾಳುಮೆಣಸು ಪುಡಿ ಕೂಡ ಸೇರಿಸಿ. ಈ ಕಾಂಬಿನೇಷನ್ ಅತೀ ಉತ್ತಮವಾಗಿ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿ ಬೇಗ ಬೇಗ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.
ಪಾಲಕ್ -ನಿಂಬೆರಸ: ಪಾಲಕ್‌ನಲ್ಲಿ ಐರನ್ ಅಂಶ ಇರುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಕಬ್ಬಿಣದ ಅಂಶ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ನಾವು ಬರೀ ಪಾಲಕ್‌ನ ಪದಾರ್ಥ ತಿಂದರೆ, ನಮ್ಮ ದೇಹ ಹೆಚ್ಚು ಐರನ್ ಪಡೆಯುವಲ್ಲಿ ವಿಫಲವಾಗಬಹುದು. ಹಾಗಾಗಿ ನೀವು ಪಾಾಲಕ್ ಪಲ್ಯ, ಸಾರು, ಪಾಲಕ್ ಪಲಾವ್ ಏನೇ ಮಾಡಿದ್ರೂ, ಅದರ ಮೇಲೆ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಸೇವಿಸಿದರೆ, ನಿಮ್ಮ ದೇಹ ಹೆಚ್ಚು ಐರನ್ ಹೀರಿಕ“ಳ್ಳುತ್ತದೆ.
ಅನ್ನ ಮತ್ತು ಈರುಳ್ಳಿ ಉಪ್ಪಿನಕಾಯಿ: ಈರುಳ್ಳಿ ಉಪ್ಪಿನಕಾಯಿಯನ್ನು ಸಿರ್ಕೆವಾಲಿ ಪ್ಯಾಜ್ ಎನ್ನಲಾಗುತ್ತದೆ. ಅನ್ನ ತಿಂದರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ನೀವು ಅನ್ನದ ಜತೆಗೆ ಈ ಈರುಳ್ಳಿ ಉಪ್ಪಿನ ಕಾಯಿ ತಿಂದರೆ, ಇದು ಶುಗರ್ ಸ್ಪೈಕ್ ಹೆಚ್ಚಾಗುವುದನ್ನು ತಪ್ಪಿಸಿ ನಿಮ್ಮನ್ನು ಆರೋಗ್ಯಕರವಾಗಿ ಇರುವಂತೆ ನೋಡಿಕ“ಳ್ಳುತ್ತದೆ.
ಗ್ರೀನ್ ಟೀ ಮತ್ತು ನಿಂಬೆರಸ: ಗ್ರೀನ್ ಟೀ ಜತೆಗೆ ನಿಂಬೆ ರಸ ಸೇರಿಸಿ ಸೇವಿಸಿದರೆ, ಆರೋಗ್ಯಕ್ಕೆ ಉತ್ತಮ.




