Saturday, July 5, 2025

Latest Posts

Health Tips: 50 ವರ್ಷ ದಾಟಿದ ವಯಸ್ಕರಲ್ಲಿ ಈ ಸಮಸ್ಯೆ ಕಂಡುಬರುತ್ತೆ ಎಚ್ಚರ!

- Advertisement -

Health Tips: ವೆರಿಕೋಸ್‌ ವೇನ್ಸ್ ಅನ್ನೋ ಪದವನ್ನು ನೀವು ಕೇಳಿರುತ್ತೀರಿ. ಆದರೆ ಹಾಗೆ ಎಂದರೇನು..? ಅನ್ನೋ ಬಗ್ಗೆ ಕೆಲವರಿಗೆ ಗೊತ್ತಿರುವುದಿಲ್ಲ. ವೆರಿಕೋಸ್ ವೇನ್ಸ್ ಅನ್ನೋದು ರಕ್ತನಾಳಗಳಲ್ಲಿ ಸಮಸ್ಯೆ ಕಂಡುಬರುವುದು. 50 ವರ್ಷ ದಾಟಿದ ಬಳಿಕ ರಕ್ತನಾಳಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ ನೋಡಿ.

ನಮ್ಮ ಹೃದಯದಲ್ಲಿ ಎರಡು ರಕ್ತನಾಳಗಳಿರುತ್ತದೆ. ಹೃದಯದಿಂದ ಅಂಗಾಂಗಗಳಿಗೆ ಹೋಗುವ ರಕ್ತನಾಳ ಶುದ್ಧ ರಕ್ತನಾಳವಾಗಿರುತ್ತದೆ. ಅಂಗಾಂಗಗಳಿಂದ ಹೃದಯಕ್ಕೆ ರಕ್ತ ಹೋಗುವ ರಕ್ತನಾಳ ಅಶುದ್ಧ ರಕ್ತನಾಳವಾಗಿರುತ್ತದೆ. ಆದರೆ ನೀವು ತೆಗೆದುಕೊಂಡ ಆಹಾರದಲ್ಲಿ ಏರರುಪೇರಾದಾಗ, ರಕ್ತ ಕಣಗಳು ಗಟ್ಟಿಯಾಗಿ, ರಕ್ತನಾಳಗಳಲ್ಲಿ ಸಂಚರಿಸಲು ಸಾಧ್ಯವಾಗದೇ, ಕಾಲುಗಳಲ್ಲಿ ನಿಲ್ಲುತ್ತ ಹೋಗುತ್ತದೆ. ಇದನ್ನೇ ವೆರಿಕೋಸ್ ವೇನ್ಸ್ ಎನ್ನಲಾಗುತ್ತದೆ.

ಇದರಿಂದ ಕಾಲುಗಳಲ್ಲಿ ಸೆಳೆತ, ಪಾದಗಳಲ್ಲಿ ಉರಿಯುಂಟಾಗುತ್ತದೆ. ಸ್ಪರ್ಶಜ್ಞಾನವಿಲ್ಲದೇ ಇರುವುದು. ಹೆಚ್ಚು ಹೊತ್ತು ಕೂರಲಾಗುವುದಿಲ್ಲ. ಹೆಚ್ಚು ಹೊತ್ತು ನಡೆಯಲಾಗುವುದಿಲ್ಲ. ಹೆಚ್ಚು ದೂರ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಸಮಸ್ಯೆಗೆ ಪರಿಹಾರವೇನು ಎಂದು ವೈದ್ಯರೇ ವಿವರಿಸಿದ್ದಾರೆ ವೀಡಿಯೋ ನೋಡಿ.

- Advertisement -

Latest Posts

Don't Miss