Health Tips: ಡ್ಯಾಂಡ್ರಫ್ ಅನ್ನೋದು ಒಂದು ಫಂಗಲ್ ಇನ್‌ಫೆಕ್ಷನ್. ಹಾಗಾಗಿ ಎಷ್ಟು ಬೇಗ ಆಗತ್ತೋ, ಅಷ್ಟು ಬೇಗ ಈ ಇನ್‌ಫೆಕ್ಷನ್ ತೆಗೆದು ಹಾಕಬೇಕು. ಇದರಿಂದ ಎಷ್ಟೋ ಬಾರಿ, ನಾವು ಹಲವು ಖುಷಿಯ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ. ಎಲ್ಲಿ ನಮ್ಮ ಡ್ಯಾಂಡ್ರಫ್ ಕಂಡು, ಜನ ನಮ್ಮ ಬಗ್ಗೆ ಏನೇನೋ ಮಾತನಾಡಿಕೊಂಡು ಬಿಟ್ಟರೆ ಅನ್ನುವ ಆತಂಕ ನಮ್ಮನ್ನು ಕಾಡುತ್ತದೆ. ಹಾಗಾಗಿ ನಾವಿಂದು ಡ್ಯಾಂಡ್ರಫ್ ಹೋಗಲಾಡಿಸಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಮೊದಲು ನಾಲ್ಕರಿಂದ 5 ದಾಸವಾಳದ ಹೂವು ತೆಗೆದುಕೊಂಡು, ಸ್ವಚ್ಛವಾಗಿ ತೊಳೆದು, ನೀರಿನಲ್ಲಿ ಕುದಿಸಿ. ಇದರ ಪೇಸ್ಟ್ ತಯಾರಿಸಿ. ಬಳಿಕ ಇದಕ್ಕೆ ಕೊಂಚ ಬೆಚ್ಚಗೆ ಮಾಡಿದ ತೆಂಗಿನ ಎಣ್ಣೆ ಸೇರಿಸಿ. ಇವೆರಡೂ ಸೇರಿಸಿ, ಕಾಲು ಕಪ್ ಆದರೆ ಸಾಕು. ಈ ಮಿಶ್ರಣವನ್ನು ನೆತ್ತಿಯ ಮೇಲೆ ಹಚ್ಚಿ. ಒಂದೂವರೆ ಗಂಟೆ ಬಿಟ್ಟು, ಹೇರ್ ವಾಶ್ ಮಾಡಿ.
ಎರಡನೇಯದಾಗಿ 1ಸ್ಪೂನ್ ಮೆಂತ್ಯೆಯನ್ನು ಒಂದು ಸ್ಪೂನ್ ಮೊಸರಿನಲ್ಲಿ ನೆನೆಸಿಡಿ. ಬಳಿಕ ಸ್ವಲ್ಪ ಕರಿಬೇವು, ನೆಲ್ಲಿಕಾಯಿ ಎಲ್ಲವನ್ನೂ ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿ. ಇದನ್ನು ಕೂದಲ ಬುಡಕ್ಕೆ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು ತೆಲ ಸ್ನಾನ ಮಾಡಿ. ಇದರಿಂದ ನಿಮ್ಮ ಕೂದಲ ಬುಡ ಗಟ್ಟಿಗೊಳ್ಳುತ್ತದೆ.
ಇದೆಲ್ಲದರ ಜೊತೆಗೆ ಉತ್ತಮ ಆಹಾರ ಸೇವನೆ, ಹೆಚ್ಚು ಮಸಾಲೆ ಬಳಸದ ಆಹಾರ ಸೇವನೆ. ಹಣ್ಣು, ತರಕಾರಿ, ಜ್ಯೂಸ್, ಎಳನೀರು, ನೀರಿನ ಸೇವನೆ ಮಾಡಿ. ಚೆನ್ನಾಗಿ ನಿದ್ದೆ ಮಾಡಿ. ಯಾವುದರ ಬಗ್ಗೆಯೂ ಹೆಚ್ಚು ಚಿಂತೆ ಮಾಡಬೇಡಿ. ಯಾಕಂದ್ರೆ ಹೆಚ್ಚು ಚಿಂತೆ ಮಾಡುವುದರಿಂದಲೂ, ಕೂದಲು ಉದುರಲು ಶುರುವಾಗುತ್ತದೆ.