- Advertisement -
Health Tips: ಶ್ವಾಸಕೋಶದಲ್ಲಿ ಏನಾದರೂ ತೊಂದರೆ ಇದ್ದರೆ, ಅಸ್ತಮಾ ರೋಗ ಬರುತ್ತದೆ. ಶ್ವಾಸಕೋಶ ಕಟ್ಟಿಕೊಳ್ಳುವುದರಿಂದ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿಯಾದವಳು ಆರೋಗ್ಯಕರ ಆಹಾರ ಸೇವಿಸದೇ, ಆರೋಗ್ಯ ಕಾಳಜಿ ಮಾಡದೇ ಇದ್ದಲ್ಲಿ, ಮಗುವಿಗೆ ಬಾಲ್ಯದಲ್ಲೇ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ.
ಧೂಳು ಭರಿತವಾದ ವಾತಾವರಣ, ಬ್ಯಾಡ್ ಹ್ಯಾಬಿಟ್ಸ್, ಅನುವಂಶಿಯವಾಗಿಯೂ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಶ್ವಾಸಕೋಶದ ಆರೋಗ್ಯ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ. ನಮ್ಮ ತಪ್ಪಿನಿಂದ ಅಥವಾ ಅನುವಂಶಿಕವಾಗಿ ಹರಡುವ ರೋಗವಾಗಿದೆ.
ಅಸ್ತಮಾ ಇರುವ ಲಕ್ಷಣಗಳು ಕಾಣಿಸಿಕೊಂಡರೆ, ಅಂಥ ಸಮಯದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲವಾದರೆ, ಇದು ನಿಮ್ಮ ಜೀವಕ್ಕೆ ಕುತ್ತು ತರಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -

