Saturday, July 5, 2025

Latest Posts

Health Tips: ಪುದೀನಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು.?

- Advertisement -

Health Tips: ಪುದೀನಾ ಬಳಸದೇ ಹಲವು ಚಾಟ್‌ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಪಾನೀಪುರಿ, ಮಸಾಲೆ ಪುರಿ, ಕಚೋರಿ, ಸಮೋಸಾ ಸೇರಿ ಹಲವು ತಿಂಡಿಗಳಲ್ಲಿ ಹಸಿರು ಚಟ್ನಿ ತಯಾರಿಸಲು ಪುದೀನಾ ಅವಶ್ಯಕ. ಆದರೆ ಪುದೀನಾ ಬರೀ ರುಚಿಕರ ತಿಂಡಿ ಮಾಡಲಷ್ಟೇ ಅಲ್ಲ. ಬದಲಾಗಿ ನಮ್ಮ ದೇಹಕ್ಕಾಗುವ ಹಲವು ಸಮಸ್ಯೆಗಳನ್ನು ನಿವಾರಿಸಲು ಪುದೀನಾ ಬಳಸಬಹುದು. ಹಾಗಾದ್ರೆ ಪುದೀನಾ ಸಮಸ್ಯೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ನಿಮಗೆ ಹೊಟ್ಟೆನೋವು, ಹೊಟ್ಟೆಗೆ ಸಂಬಂದಿಸಿದ ಸಮಸ್ಯೆ ಯಾವುದೇ ಇದ್ದರೂ, ನೀವು ನಾಲ್ಕು ಪುದೀನಾ ಎಲೆಗಳನ್ನು ಅಗಿದು ತಿನ್ನಬಹುದು. ಇದರಿಂದ ಹೊಟ್ಟೆ ಸಮಸ್ಯೆ ಕಡಿಮೆಯಾಗುತ್ತದೆ.

ಗರ್ಭಿಣಿಯಾಗಿದ್ದಾಗ, ನಿಮಗೆ ಪದೇ ಪದೇ ವಾಕರಿಕೆ ಬಂದಂತಾಗುತ್ತಿದ್ದರೆ, ನೀವು ಪುದೀನಾ ಸೇವನೆ ಮಾಡುವುದರಿಂದ ವಾಕರಿಕೆ ಸಮಸ್ಯೆ ಕಡಿಮೆಯಾಗುತ್ತದೆ.

ಕ್ಯಾನ್ಸರ್ ಇದ್ದವರಿಗೆ ಕಿಮೋ ಥೆರೆಪಿ ಮಾಡಿದ್ದಲ್ಲಿ, ಬಳಿಕ ವಾಕರಿಕೆ ಬಂದ ಹಾಗೆ ಆಗುತ್ತದೆ. ಇಂಥ ಸಮಯದಲ್ಲೂ ಪುದೀನಾ ಸೇವನೆ ಸಹಕಾರಿಯಾಗಿದೆ. ತಿಂಗಳ ಸಮಸ್ಯೆ ಇದ್ದಾಗಲೂ ಪುದೀನಾ ಸೇವನೆ ಮಾಡಬಹುದು.

ಮುಖ್ಯವಾದ ವಿಚಾರ ಅಂದ್ರೆ, ನಿಮಗೆ ಪುದೀನಾ ತಿಂದರೆ ಅಲರ್ಜಿ ಎಂದಾದರೆ, ಅಥವಾ ಪುದೀನಾ ತಿಂದರೂ ನಿಮ್ಮ ಆರೋಗ್ಯ ಸಮಸ್ಯೆ ಸಂಪೂರ್ಣವಾಗಿ ಗುಣಮುಖವಾಗದಿದ್ದಲ್ಲಿ, ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ, ಇಂಥ ಮನೆ ಮದ್ದು ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಸಹಾಯ ಮಾಡುತ್ತದೆ.

- Advertisement -

Latest Posts

Don't Miss