- Advertisement -
Health Tips: ಪ್ರತಿದಿನ ನಾವು ಅರ್ಧ ಗಂಟೆಯಾದರೂ ವಾಕಿಂಗ್ ಮಾಡಬೇಕು. ಆ ಸಮಯ ಅದಕ್ಕೆಂದೇ ಮೀಸಲಿಡಬೇಕು. ಯಾರು ಪ್ರತಿದಿನ ವಾಕಿಂಗ್‌ನ್ನು ಕ್ರಮಪ್ರಕಾರವಾಗಿ ಮಾಡುತ್ತಾರೋ, ಅವರಿಗೆ ಆರೋಗ್ಯ ಸಮಸ್ಯೆ ಬರುವುದು ಕಡಿಮೆ. ಹಾಗಾದ್ರೆ ಯಾಕೆ ವಾಕಿಂಗ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಸಮಯ ಉಳಿಸಿ ವಾಕಿಂಗ್ ಮಾಡಲು ಆಗದಿದ್ದಲ್ಲಿ, ನೀವು ಆಫೀಸಿಗೆ, ಅಥವಾ ಮಾರುಕಟ್ಟೆಗೆ ನಡೆದೇ ಹೋಗಲು ಪ್ರಯತ್ನಿಸಿ. ಆಫೀಸು ತುಂಬಾ ದೂರವಿದ್ದರೆ, 5 ನಿಮಿಷದ ವಾಕ್ ಮಾಡಲಾದರೂ ಪ್ರಯತ್ನಿಸಿ.
ಇನ್ನು ಹೆಚ್ಚು ಮೆಟ್ಟಿಲುಗಳನ್ನು ಬಳಸಲು ಪ್ರಯತ್ನಿಸಿ. ಎಸ್ಕಲೇಟರ್, ಮುಂತಾದ ಸೌಲಭ್ಯವಿದ್ದರೂ ನೀವು ಮೆಟ್ಟಿಲು ಬಳಸಿದ್ದಲ್ಲಿ, ನಿಮ್ಮ ಆರೋಗ್ಯ ಚೆನ್ನಾಗಿ ಸುಧಾರಿಸುತ್ತದೆ. ಏಕೆಂದರೆ ಇದು ಕೂಡ ವ್ಯಾಯಾಮದ 1 ಭಾಗ.
ವಾಕ್ ಮಾಡಲು ಸೌಲಭ್ಯ ಚೆನ್ನಾಗಿಲ್ಲವೆಂದಲ್ಲಿ ನೀವು, ನಿಮ್ಮ ಮನೆಯಲ್ಲಿ, ಅಥವಾ ಟೆರೆಸ್ ಮೇಲೆಯೇ ವಾಕ್ ಮಾಡಬಹುದು.
- Advertisement -